ಭಾರತ-ಪಾಕ್ ಗಡಿಯಲ್ಲಿ ಸುರಂಗ ಪತ್ತೆ!

ಶ್ರೀನಗರ: ಭಾರತ-ಪಾಕ್ ಗಡಿಯಲ್ಲಿ ಬಿಎಸ್ ಎಫ್ ಯೋಧರು ಸುರಂಗವನ್ನು ಪತ್ತೆಹಚ್ಚಿದ್ದಾರೆ. ಸಾಂಭಾ ಜಿಲ್ಲೆಯಲ್ಲಿ ಸುರಂಗ ಕಂಡು ಬಂದಿದ್ದು ಸುರಂಗವು 25 ಅಡಿ ಆಳವಿದ್ದು, 150 ಮೀಟರ್ ಅಷ್ಟು ಉದ್ದವಿದೆ. ಮರಳು ಚೀಲ ಹಾಗೂ ಕರಾಚಿ, ಶಕ್ಕೇರ್‍ಗಢದ ಕೆಲವು ಮಾರ್ಕಿಂಗ್‍ಗಳು ಲಭ್ಯವಾಗಿವೆ. ಇಂತಹ ಸುರಂಗದಿಂದ ಉಗ್ರರು ಒಳನುಸುಳುವ ಸಾಧ್ಯತೆ ಇರುವುದರಿಂದ ಸುತ್ತಮಮುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜಮ್ಮುವಿನ ಬಳಿ ಇದಕ್ಕೂ ಮೊದಲು ಒಂದು ಸುರಂಗ ಪತ್ತೆಯಾಗಿತ್ತು. 2012ರಲ್ಲಿ ಬಿಎಸ್ ಎಫ್ ಯೋಧರು 400 ಮೀಟರ್ ಉದ್ದದ ಸುರಂಗವನ್ನು ಪತ್ತೆ ಹಚ್ಚಿದ್ದರು. 2014ರಲ್ಲಿ ಪಲನ್‍ವಾಲಾ ಸೆಕ್ಟರ್ ಬಳಿ ಕೂಡ ಇಂತದ್ದೇ ಸುರಂಗ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *