ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ಮತ್ತೋರ್ವ ಅರ್ಚಕರ ಶವ ಪತ್ತೆ!

ಮಡಿಕೇರಿ: ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದ ಮತ್ತೊಬ್ಬ ವ್ಯಕ್ತಿಯ ಶವ ಇಂದು ಪತ್ತೆಯಾಗಿದೆ. ಶವ ಸಂಪೂರ್ಣ ಕೊಳೆತಿದ್ದು ಸಂಬಂಧಿಕರು ಗುರುತು ಪತ್ತೆಹಚ್ಚಿದ್ದಾರೆ. ಕಳೆದ ಆ. 6ರಂದು ಘಟನೆ ನಡೆದಿತ್ತು. ಭಾರೀ ಮಳೆಯ ಕಾರಣ ಬ್ರಹ್ಮಗಿರಿ ಬೆಟ್ಟ ಕುಸಿದು ಮನೆಗಳ ಮೇಲೆ ಬಿದ್ದಿದ್ದು ಪ್ರಧಾನ ಅರ್ಚಕ ನಾರಾಯಣ ಆಚಾರ್ ಸಹಿತ ಐವರು ಭೂಸಮಾಧಿಯಾಗಿದ್ದರು. ನಾಪತ್ತೆಯಾಗಿದ್ದ ನಾರಾಯಣ ಆಚಾರ್, ಆನಂದ ತೀರ್ಥ ಎಂಬವರ ಮೃತದೇಹಗಳು ಕೆಲದಿನಗಳ ಹಿಂದೆ ಪತ್ತೆಯಾಗಿತ್ತು. ಇನ್ನೂ ಇಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.