ಬ್ರಹ್ಮಗಿರಿ ಬೆಟ್ಟ ಕುಸಿದು ನಾಪತ್ತೆಯಾಗಿರುವ ಬಂಟ್ವಾಳದ ಯುವಕ ಸಹಿತ ಐವರಿಗೆ ಶೋಧ!

ಮಂಗಳೂರು: ಕೊಡಗು ತಲಕಾವೇರಿ ಬಳಿಯ ಬ್ರಹ್ಮಗಿರಿಬೆಟ್ಟ ಮನೆಗಳ ಮೇಲೆ ಕುಸಿದು ನಾಪತ್ತೆಯಾಗಿರುವ ಐವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ತಲಕಾವೇರಿ ದೇವಳದ ಸಹಾಯಕ ಅರ್ಚಕ ಕಾಸರಗೋಡು ಅಡೂರು ನಿವಾಸಿ ಶ್ರೀನಿವಾಸ ಪಡ್ಡಿಲ್ಲಾಯ(33) ಮತ್ತು ಬಂಟ್ವಾಳದ ರಾಮಕೃಷ್ಣ ರೇಣುಕಾ ಭಟ್ (ಅಪ್ಪು ಭಟ್) ದಂಪತಿಯ ಪುತ್ರ ರವಿಕಿರಣ್(23) ನಾಪತ್ತೆಯಾಗಿದ್ದಾರೆ. ಗುರುವಾರ ಬೆಳಿಗ್ಗೆ ತಲಕಾವೇರಿಯಲ್ಲಿ ಗುಡ್ಡ ಜರಿದು ಬಿದ್ದ ಹಿನ್ನೆಲೆಯಲ್ಲಿ ಆರ್ಚಕರ ಮನೆ ಸಂಪೂರ್ಣ ಜಲಸಮಾಧಿಯಾಗಿದೆ. ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಅವರ ಪತ್ನಿ ಹಾಗೂ ಮೂವರು ಸಹಾಯಕ ಅರ್ಚಕರು ನಾಪತ್ತೆಯಾಗಿದ್ದಾರೆ.