ಬೋಳಿಯಾರ್: ಬಾವಿಗೆ ಬಿದ್ದು ಯುವಕ‌ ದುರ್ಮರಣ

ಉಳ್ಳಾಲ‌: ಕೃಷಿ ಕೆಲಸ ಮಾಡಿಕೊಂಡಿದ್ದ ಯುವಕನೋರ್ವ ಅನಿರೀಕ್ಷಿತವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಬೋಳಿಯಾರ್ ಗ್ರಾಮದಲ್ಲಿ ನಡೆದಿದೆ.
ಬೋಳಿಯಾರ್ ಗ್ರಾಮದ ಧರ್ಮತೋಟ ನಿವಾಸಿ ಕ್ಸೇವಿಯರ್ ಕ್ರಾಸ್ತ ಎಂಬವರ ಮಗ ವಿನಾನ್ಸ್ ನಿಖಿಲ್ ಕ್ರಾಸ್ತ(28) ಮೃತ ಯುವಕ.
ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದ ನಿಖಿಲ್, ಮೊನ್ನೆ
ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದು ಸಂಜೆ ಮತ್ತೆ ತೋಟಕ್ಕೆ ಹೋಗಿ ಬಳಿಕ ನಾಪತ್ತೆಯಾಗಿದ್ದ.‌ ಮನೆಮಂದಿ ಹುಡುಕಾಟ ನಡೆಸಿದರೂ ಪ್ರಯೋಜನ ಆಗದ ಕಾರಣ ಸ್ಥಳೀಯರಿಗೆ ಮಾಹಿತಿ ನೀಡಿದ್ದರು. ಅದರಂತೆ ಸ್ಥಳೀಯ ಸರ್ವ ಧರ್ಮೀಯ ಯುವಕರು ಹುಡುಕಾಟ ನಡೆಸಿದ್ದು, ಇದೇ ವೇಳೆ ಯುವಕನ ಚಪ್ಪಲಿಗಳು ಬಾವಿಯಲ್ಲಿ ಪತ್ತೆಯಾಗಿವೆ. ಮಳೆಯ ನಡುವೆಯೂ ಯುವಕರು ಜೀವದ ಹಂಗು ತೊರೆದು ಬಾವಿಗಿಳಿದು ರಾತ್ರಿ ಹನ್ನೊಂದು ಗಂಟೆಯ ವೇಳೆಗೆ ಮೃತದೇಹ ಮೇಲಕ್ಕೆತ್ತುವಲ್ಲಿ ಸಫಲರಾಗಿದ್ದಾರೆ. ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾಲು ಜಾರಿ ಬಾವಿಗೆ ಬಿದ್ದಿರುವ ಶಂಕೆ ಮನೆಮಂದಿ ವ್ಯಕ್ತಪಡಿಸಿ ಕೊಣಾಜೆ ಠಾಣೆಗೆ ದೂರು ನೀಡಿದ್ದಾರೆ. ಮೃತ ಯುವಕ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *