ಬೇಟೆಗೆ ತೆರಳಿದ್ದವನೇ ಗುಂಡೇಟಿಗೆ ಬಲಿಯಾದ!

ಮಡಿಕೇರಿ: ಬೇಟೆಗೆ ತೆರಳಿದ್ದವನೇ ಜೊತೆಗಾರರ ಗುಂಡೇಟಿಗೆ ಬಲಿಯಾದ ಘಟನೆ ಮಕ್ಕಂದೂರು ಗ್ರಾಮದ ಉದಯಗಿರಿ ಎಂಬಲ್ಲಿ ನಡೆದಿದೆ. ಆರೋಪಿ ಕೋವಿ ಸಮೇತ ಪೊಲೀಸರೆದುರು ಶರಣಾಗಿದ್ದಾನೆ.
ಮಡಿಕೇರಿ ತಾಲೂಕು ಲಾರಿ ಮಾಲಕರ ಸಂಘದ ಅಧ್ಯಕ್ಷ ಶಿವ ಬೋಪಣ್ಣ(37) ಗುಂಡೇಟಿನಿಂದಾಗಿ ಸಾವನ್ನಪ್ಪಿದವರು. ಈತನ ಜೊತೆಗಿದ್ದ ಶರಣ್ ಎಂಬವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೋಪಣ್ಣ, ಶರಣ್ ಹಾಗೂ ದೇವಯ್ಯ ಸ್ನೇಹಿತರಾಗಿದ್ದು ನಿನ್ನೆ ರಾತ್ರಿ ಬೇಟೆಗೆಂದು ಕಾಡಿಗೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗುಂಡೇಟು ತಗಲಿ ಶಿವ ಬೋಪಣ್ಣ ಸಾವನ್ನಪ್ಪಿದ್ದಾರೆ. ಮಡಿಕೇರಿ ನಿವಾಸಿ ದೇವಯ್ಯ ಪೊಲೀಸರಿಗೆ ಶರಣಾಗಿದ್ದಾನೆ.