ಬೆಂಗಳೂರು ಗಲಭೆ: ಮತೀಯ ಸಂಘಟನೆಗಳ ನಿಷೇಧಕ್ಕೆ ಹಿಂಜಾವೇ ಒತ್ತಾಯ

ಮಂಗಳೂರು: ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ಪೂರ್ವಯೋಜಿತವಾಗಿ ಎಸ್.ಡಿ.ಪಿ.ಐ. ಮತ್ತು ಪಿ.ಎಫ್.ಐ. ಸಂಘಟನೆಗಳು ನಡೆಸಿದ ಮತೀಯ ಗೂಂಡಾಗಿರಿಯನ್ನು ಖಂಡಿಸಿ ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲಾ ಸಮಿತಿ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮನವಿಯನ್ನು ಸಲ್ಲಿಸಿತು.
ಸಮಾಜದಲ್ಲಿ ಪದೇ ಪದೇ ಗಲಭೆ ಸೃಷ್ಟಿಸಿ ನೇರವಾಗಿ ಭಾಗಿಯಾಗಿರುವ ಮತೀಯ ಸಂಘಟನೆಯನ್ನು ನಿಷೇಧಿಸುವಂತೆ ಮಾನ್ಯ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಸಲಾಯಿತು. ಈ ಸಂದರ್ಭ ಜಿಲ್ಲಾಧ್ಯಕ್ಷ ಹರೀಶ್ ಶಕ್ತಿನಗರ ಮತ್ತು ಜಿಲ್ಲಾ ಪಧಾದಿಕಾರಿಗಳಾದ ಸಂದೀಪ್ ಅಂಬ್ಲಮೊಗರು, ಪುಷ್ಪರಾಜ್ ಕುಳಾಯಿ, ಪ್ರವೀಣ್ ಬಂಟ್ಸ್ ಹಾಸ್ಟೆಲ್ ಉಪಸ್ಥಿತರಿದ್ದರು.