ಬೆಂಗರೆ ಆರೋಗ್ಯ ಕೇಂದ್ರದ ಎದುರು ಡಿವೈಎಫ್ ಐ ಪ್ರತಿಭಟನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ವಿರೋಧಿಸಿ ಬೆಂಗರೆ ಪ್ರದೇಶದ ನಗರ ಆರೋಗ್ಯ ಕೇಂದ್ರದ ಎದುರು ಡಿವೈಎಫ್‍ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅವರು, ಕೊರೋನ ವಿರುದ್ಧ ಸರಕಾರಗಳು ಕೈಗೊಂಡ ಪರಿಹಾರ ಕ್ರಮಗಳೆಲ್ಲ ವಿಫಲಗೊಂಡಿದೆ. ರಾಜ್ಯ ಸರಕಾರ ಕೊರೊನಾ ಹೆಸರಲ್ಲಿ ಮಾಸ್ಕ್, ವೆಂಟಿಲೇಟರ್ ಇನ್ನಿತರ ಸಾಮಗ್ರಿಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದೆ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ದರ ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಡಿವೈಎಫ್ ಐ ಜಿಲ್ಲಾದ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ ಬೆಂಗರೆ ತೀರಾ ಹಿಂದುಳಿದ ಪ್ರದೇಶ ಇಲ್ಲಿನ ನಿವಾಸಿಗಳನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಲಾಗಿದೆ. ಹಕ್ಕುಪತ್ರ, ನೀರು ಸಮಸ್ಯೆ ಹಿಂದಿನಂತೆಯೇ ಇದೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ ವೈದ್ಯರ ಸಹಿತ ನುರಿತ ಸಿಬ್ಬಂದಿ ನೇಮಿಸಬೇಕು ಎಂದು ಒತ್ತಾಯಿಸಿದು. ಡಿವೈಎಫ್‍ಐ ಮುಖಂಡ ಸುನೀಲ್ ತೇವುಲ, ನೌಶಾದ್ ಬೆಂಗರೆ, ಬೆಂಗರೆ ಗ್ರಾಮ ಸಮಿತಿಯ ಅದ್ಯಕ್ಷ ಹನೀಫ್ ಬೆಂಗರೆ ಕಾರ್ಯದರ್ಶಿ ರಿಝ್ವಾನ್, ಬಿಲಾಲ್, ನಾಸಿರ್ ಹಾಜರಿದ್ದರು.

Leave a Reply

Your email address will not be published. Required fields are marked *