ಬಿಜೆಪಿ ಶಾಸಕನ ವಿರುದ್ಧ ಅತ್ಯಾಚಾರ ಆರೋಪ: ಮಹಿಳೆ ದೂರು

ಡೆಹ್ರಾಡೂನ್: ಉತ್ತರಾಖಂಡ ಬಿಜೆಪಿ ಶಾಸಕ ಮಹೇಶ್ ನೇಗಿ ತಮ್ಮ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ದ್ವಾರಹಾತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ನೇಗಿ ತಮ್ಮ ಮೇಲೆ 2016ರಿಂದ 2018ರ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆಪಾದಿಸಿದ್ದಾರೆ.
ತನ್ನ ಮಗುವಿಗೆ ಶಾಸಕ ನೇಗಿ ತಂದೆಯಾಗಿದ್ದು ಸತ್ಯ ಪತ್ತೆಹಚ್ಚಲು ಶಾಸಕರ ಡಿಎನ್‍ಎ ಪರೀಕ್ಷೆ ನಡೆಸಲಿ ಎಂದು ಮಹಿಳೆ ಸವಾಲು ಹಾಕಿದ್ದಾರೆ. ಮಸ್ಸೂರಿ, ನೈನಿತಾಲ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ಕರೆದೊಯ್ದಿದ್ದ ಶಾಸಕ 2016ರಿಂದ 2018ರ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದರು ಎಂದು ಹೇಳಿದ್ದಾರೆ. ಶಾಸಕರ ನೆರೆಮನೆಯ ನಿವಾಸಿಯಾಗಿರುವ ಮಹಿಳೆ, 2016ರಲ್ಲಿ ತಾಯಿ ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಶಾಸಕರನ್ನು ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ವಿಷಯವನ್ನು ಎಲ್ಲೂ ಬಾಯಿ ಬಿಡದಂತೆ ಶಾಸಕರ ಪತ್ನಿ 25 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದರು ಎಂದೂ ಮಹಿಳೆ ಆಪಾದಿಸಿದ್ದಾರೆ. ಶಾಸಕರ ಪತ್ನಿಯೂ ದೂರು ನೀಡಿದ್ದು, ಮಹಿಳೆ ತನ್ನ ಪತಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾಳೆ ಎಂದು ಆಪಾದಿಸಿದ್ದಾರೆ. ನೆಹರೂ ಕಾಲನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *