ಬಿಜೆಪಿ ಮುಖಂಡನ ಹತ್ಯೆಗೆ ಬಂದಿದ್ದ ಶಾರ್ಪ್ ಶೂಟರ್ ಸೆರೆ!

ಅಹಮದಾಬಾದ್: ಬಿಜೆಪಿ ಮುಖಂಡನ ಹತ್ಯೆಗೆ ಸಂಚು ರೂಪಿಸಿ ಕಾದು ಕುಳಿತಿದ್ದ ಛೋಟಾ ಶಕೀಲ್ ಬಣದ ಶಾರ್ಪ್ ಶೂಟರ್ ನನ್ನು ವಶಕ್ಕೆ ಪಡೆದ ಎಟಿಎಸ್ ಅಧಿಕಾರಿಗಳು ಹತ್ಯೆ ಸಂಚನ್ನು ವಿಫಲಗೊಳಿಸಿದ್ದಾರೆ. ಆರೋಪಿಯಿಂದ ಎರಡು ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆತ ಬಿಜೆಪಿ ಮುಖಂಡರ ಹತ್ಯಾ ಸಂಚು ಬಾಯಿಬಿಟ್ಟಿದ್ದಾನೆ.
ಶೂಟರ್ ಮುಂಬೈಯವನಾಗಿದ್ದು ಮಂಗಳವಾರ ನಗರಕ್ಕೆ ಬಂದಿದ್ದ. ರಾತ್ರಿಯೇ ಆತ ಎಟಿಎಸ್ ಬಲೆಗೆ ಬಿದ್ದಿದ್ದಾನೆ. ಬಿಜೆಪಿ ಮುಖಂಡ ಗೋರ್ಧನ್ ಜಡಾಫಿಯಾ ಹತ್ಯೆಗಾಗಿ ಶೂಟರ್ ಬಂದಿದ್ದ ಎನ್ನಲಾಗಿದೆ. ರಾಜ್ಯ ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರು ಗೋರ್ಧನ್ ಅವರಿಗೂ ಮಾಹಿತಿ ನೀಡಿದ್ದಾರೆ. ಶೂಟರ್ ಅಹಮಬಾದ್ ನ ರಿಲೀಫ್ ರೋಡ್ ನಲ್ಲಿರುವ ಹೋಟೆಲ್ ನಲ್ಲಿ ತಂಗಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಟಿಎಸ್ ತಂಡದ ಮೇಲೆ ಆತ ಗುಂಡಿನ ದಾಳಿ ನಡೆಸಿದ್ದಾನೆ. ಆದರೆ ಯಾರಿಗೂ ಏನೂ ಅಪಾಯವಾಗಲಿಲ್ಲ. ನಂತರ ಅವನನ್ನು ಬಂಧಿಸಲಾಗಿದೆ ಎಂದು ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *