ಬಂಟ್ವಾಳ: ಮಣಿನಾಲ್ಕೂರು ಪಂಚಾಯತ್ ನಲ್ಲಿ ಉಲ್ಟಾ ಹಾರಿದ ರಾಷ್ಟ್ರಧ್ವಜ, ಗ್ರಾಮಸ್ಥರ ಆಕ್ರೋಶ!

ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮ ಪಂಚಾಯತ್ ಆವರಣದ್ಲಿ ಸ್ವಾತಂತ್ರ್ಯ ದಿನಾಚರಣೆಯ ಮರುದಿನ ತ್ರಿವರ್ಣ ಧ್ವಜ ಉಲ್ಟಾ ಹಾರಿದ್ದಲ್ಲದೆ ರಾತ್ರಿಯವರಗೂ ಹಾರಾಡಿದ ಬಗ್ಗೆ ಸ್ಥಳೀಯ ಸಂಘಟನೆಯೊಂದರ ಕಾರ್ಯಕರ್ತರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದಾರೆ.
ಮಣಿನಾಲ್ಕೂರು ಗ್ರಾಮ ಪಂಚಾಯತ್ ನಲ್ಲಿ ಆಗಸ್ಟ್ 15ರ ಬದಲಿಗೆ ಆಗಸ್ಟ್ 16ರ ಬೆಳಗ್ಗೆ ರಾಷ್ಟ್ರ ಧ್ವಜಾರೋಹಣ ಮಾಡಲಾಗಿದ್ದು ಧ್ವಜದ ಬಣ್ಣ ಉಲ್ಟಾಪಲ್ಟಾ ಅಗಿತ್ತು. ಹಸಿರು ಬಣ್ಣ ಮೇಲ್ಗಡೆ ಕೇಸರಿ ಬಣ್ಣ ತಲೆಕೆಳಗಾಗಿ ಹಾರಿದ್ದಲ್ಲದೆ ರಾತ್ರಿ ಸುಮಾರು 8 ಗಂಟೆಯವರೆಗೂ ಹಾರಾಡುತ್ತಿದ್ದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯರೇ ಸೇರಿ ಧ್ವಜ ಕೆಳಕ್ಕೆ ಇಳಿಸಿದ್ದಾರೆ ಎಂಬ ಮಾಹಿತಿಯಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕಠಿಣ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.