ಬಂಟ್ವಾಳ: ಬೇಕರಿ ಬೆಂಕಿಗಾಹುತಿ, ಲಕ್ಷಾಂತರ ರೂ. ನಷ್ಟ

ಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ.
ಪಾಣೆಮಂಗಳೂರು ಕಲ್ಲುರ್ಟಿ ದೇವಸ್ಥಾನದ ಸಮೀಪದ ಲ್ಲಿರುವ ವಾಣಿಜ್ಯ ಸಂಕೀರ್ಣವೊಂದರಲ್ಲಿರುವ ವಿಷ್ಣು ಬೇಕರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿರುವಂತದ್ದು.
ರಾಜೇಶ್ ಎಂಬವರಿಗೆ ಸೇರಿದ ಅಂಗಡಿಯಾಗಿದ್ದು ಸುಮಾರು 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಇತ್ತೀಚಿಗೆ ಅಂಗಡಿಯ ನವೀಕರಣ ಕೆಲಸಗಳನ್ನು ಮಾಡಲಾಗಿತ್ತು.
ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ಬಳಿಕ ಮಧ್ಯ ರಾತ್ರಿ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
