ಪ.ಬಂಗಾಲದಲ್ಲಿ ಮುಂದಿನ ತಿಂಗಳಿಂದ ಮದ್ಯದ ಬೆಲೆ ಇಳಿಕೆ!

ಕೊಲ್ಕತ್ತಾ: ಕೊರೊನಾ ಹಾವಳಿಯಿಂದಾಗಿ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳು ಮದ್ಯದ ಮೇಲೆ ಹೆಚ್ಚುವರಿತೆರಿಗೆಯನ್ನು ವಿಧಿಸಿದವು. ಇದರಿಂದ ಮದ್ಯಪ್ರಿಯರು ಸರಕಾರಕ್ಕೆ ಶಾಪ ಹಾಕಿದರೇ ವಿನ: ಮದ್ಯ ಜಾಸ್ತಿ ಖರೀದಿಯಾಗಲಿಲ್ಲ. ತೆರಿಗೆ ಹೆಚ್ಚಳದಿಂದಾಗಿ ಮದ್ಯದ ಬೇಡಿಕೆ ಕಡಿಮೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮ ಬಂಗಾಳ ಸರಕಾರವು ಅಬಕಾರಿ ತೆರಿಗೆ ತಗ್ಗಿಸಲು ನಿರ್ಧರಿಸಿದ್ದು ಮುಂದಿನ ಸೆಪ್ಟಂಬರ್ ತಿಂಗಳಿನಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಕಳೆದ ಕೆಲ ತಿಂಗಳಿನಿಂದ ಪಶ್ಚಿಮ ಬಂಗಾಳದಲ್ಲಿ ಮದ್ಯದ ಮಾರಾಟದಲ್ಲಿ ಇಳಿಕೆಗೊಂಡಿದೆ. ಹೀಗಾಗಿ ಹೆಚ್ಚುವರಿ ತೆರಿಗೆಯನ್ನು ತೆಗೆದು ಹಾಕಿದ್ದಲ್ಲಿ ಬಹುತೇಕ ಬ್ರ್ಯಾಂಡ್ಗಳ ಬೆಲೆ ಇಳಿಕೆಯಾಗಲಿದೆ.