ಪೂರನ್‌ ಶತಕದ ಅಬ್ಬರ: ಅಮೆಜಾನ್‌ಗೆ ಸುಲಭ ಜಯ

ಪೋರ್ಟ್‌ ಆಫ್‌ ಸ್ಪೇನ್‌: ನಿಕೊಲಾಸ್‌ ಪೂರನ್‌ ದಾಖಲಿಸಿದ ಈ ಬಾರಿಯ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ನ ಮೊದಲ ಶತಕದ ನೆರವಿನಿಂದ ಇಲ್ಲಿ ಸೈಂಟ್‌ ಕೀಟ್ಸ್‌ ಹಾಗೂ ನೆವಿಸ್‌ ಪ್ಯಾಟ್ರಿಯಾಟ್ಸ್‌ ವಿರುದ್ಧದ ಪಂದ್ಯದಲ್ಲಿ ಅಮೆಜಾನ್‌ ವಾರಿಯರ್ಸ್‌ ಏಳು ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ಸೈಂಟ್ಸ್‌ ನಿಗದಿತ ೨೦ ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟಕ್ಕೆ ೧೫೦ ರನ್‌ ಗಳಿಸಿತು. ತಂಡದ ಪರ ಜೋಶುವಾ ಡಿʼಸಿಲ್ವಾ (೫೯) ಆಕರ್ಷಕ ಅರ್ಧಶತಕ ಸಿಡಿಸಿದರು. ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ ನೆರವಿನಿಂದ ೫೯ ರನ್‌ ಗಳಿಸಿದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ದಿನೇಶ್‌ ರಾಮ್‌ದಿನ್‌ ಅಜೇಯ ೩೭ ರನ್‌ ಗಳಿಸಿದರು. ಅತ್ತ ಅಮೆಜಾನ್‌ ಪರ ಕ್ರಿಸ್‌ ಗ್ರೀನ್‌ ಎರಡು ವಿಕೆಟ್‌ ಪಡೆದರು.
ಇನ್ನು ಗುರಿ ಬೆನ್ನತ್ತಿದ ಅಮೆಜಾನ್‌ ಒಂದು ಹಂತದಲ್ಲಿ ೨೫ ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸೋಲಿಗೆ ಭೀತಿಗೆ ಸಿಲುಕಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಪೂರನ್‌ ಹಾಗೂ ರಾಸ್‌ ಟೇಲರ್‌ ಮೂರನೇ ವಿಕೆಟ್‌ಗೆ ಅಜೇಯ ೧೨೮ ರನ್‌ಗಳ ಜೊತೆಯಾಟ ನಡೆಸಿ, ತಂಡಕ್ಕೆ ಗೆಲುವು ತಂದುಕೊಟ್ಟರು. ಅದರಲ್ಲೂ ಪೂರನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಎದುರಾಳಿ ತಂಡದ ಬೌಲರ್ಸ್‌ಗಳ ಅಕ್ಷರಶಃ ದಂಗಾಗಿ ಹೋದರು. ಪೂರನ್‌ ಕೇವಲ ೪೫ ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಹತ್ತು ಸಿಕ್ಸರ್‌ ನೆರವಿನಿಂದ ಅಜೇಯ ೧೦೦ ರನ್‌ ಗಳಿಸಿದರೆ ಟೇಲರ್‌ ಅಜೇಯ ೨೫ ರನ್‌ ಗಳಿಸಿದರು. ಅಂತಿಮವಾಗಿ ತಂಡ ೧೭.೩ ಓವರ್‌ಗಳಲ್ಲಿ ಮೂರು ವಿಕೆಟ್‌ ನಷ್ಟಕ್ಕೆ ೧೫೩ ರನ್‌ ಗಳಿಸಿದರು. ಸೈಂಟ್‌ ಕೀಟ್ಸ್‌ ಪರ ಜಾನ್‌ ರೂಸ್‌ ಜಾಗೆಸರ್‌ ಎರಡು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *