ಪುಲ್ವಾಮಾ ದಾಳಿ ಚಾರ್ಜ್ ಶೀಟ್ ಸಲ್ಲಿಸಿದ ಎನ್ ಐ ಎ

ಶ್ರೀನಗರ: ಪುಲ್ವಾಮಾ ಜಿಲ್ಲೆಯ ಆವಂತಿಪೊರ್ ನಲ್ಲಿ ನಡೆದ ಅತ್ಮಾಹುತಿ ದಾಳಿಯ ಹಿಂದಿನ ಸಂಚುಕೋರ ಜೈಷ್ ಎ ಮುಹಮ್ಮದ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ `ಮೊಹಮ್ಮದ್ ಭಾಯಿ’ ಸೇರಿದಂತೆ ದಾಳಿಗೆ ಕಾರಣರಾದವರನ್ನು ಭಾರತೀಯ ಸೇನೆ ಮಟ್ಟ ಹಾಕಿದೆ. ಸುಮಾರು 18 ತಿಂಗಳ ಬಳಿಕ ಎನ್ ಐಎ ತನ್ನ ತನಿಖೆಯಲ್ಲಿ ಪ್ರಗತಿ ತೋರಿಸಿದ್ದು ಇಂದು ದೋಷಾರೋಪಣಪಟ್ಟಿ ಸಲ್ಲಿಸಿದೆ.
ಫೆಬ್ರವರಿ 14ರಂದು ಸಿಆರ್ ಪಿಎಫ್ ಯೋಧರು ಬರುತ್ತಿದ್ದ ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ಕಾರು ನುಗ್ಗಿಸಿ ಸ್ಫೋಟಕ ನಡೆಸಲು ಬೇಕಾದ ಯೋಜನೆ, ಸಾಮಾಗ್ರಿ, ಸಲಕರಣೆಗಳನ್ನು ಮುದಾಸಿರ್ ಒದಗಿಸಿದ್ದ. ಮುದಾಸಿರ್ ನಿರ್ದೇಶನದಂತೆ ಆದಿಲ್ ಅಹ್ಮದ್ ದಾರ್ ಅಂದು ಸ್ಫೋಟಕಗಳನ್ನು ಹೊಂದಿದ್ದ ಮಾರುತಿ ಎಕೋ ಕಾರನ್ನು ಸಿಆರ್ ಪಿಎಫ್ ಬಸ್ ನತ್ತ ನುಗ್ಗಿಸಿ ಸ್ಫೋಟಿಸಿದ್ದ. ಈ ದುರ್ಘಟನೆಯಲ್ಲಿ 40ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾದರು ಎಂದು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *