ಪುತ್ತೂರು: `ಕ್ವಾರಂಟೈನ್’ ಉಲ್ಲಂಘಿಸಿದ 40 ಮಂದಿಯ ವಿರುದ್ಧ ಕೇಸ್!

ಮಂಗಳೂರು: ಕೊರೊನಾ ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕೆ 40 ಮಂದಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕೊರೋನ ವೈರಸ್ ರೋಗ ತಡೆಗಟ್ಟುವಿಕೆಯ ನಿಯಮ ಉಲ್ಲಂಘನೆ ಮಾಡಿ ರೋಗ ಹರಡುವಿಕೆಗೆ ಕಾರಣವಾಗಿರುವುದಾಗಿ ತಾಲೂಕು ದಂಡಾಧಿಕಾರಿ ತಹಶೀಲ್ದಾರ್ ರಮೇಶ್ ಬಾಬು ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಕಾನೂನು ಉಲ್ಲಂಘನೆ ಮಾಡಿರುವ 40 ಮಂದಿಯ ವಿರುದ್ಧ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *