ಪಿಕಪ್ ಮೇಲೆ ಉರುಳಿಬಿದ್ದ ತಂತಿಕಂಬ

ಮಂಗಳೂರು: ಪಿಕ್ ಅಪ್ ವಾಹನ ಚಲಿಸುತ್ತಿರುವಾಗಲೇ ಹೈಟೆನ್ಷನ್ ವಿದ್ಯುತ್ ಕಂಬ ಮುರಿದು ಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಸಮೀಪ ನಡೆದಿದೆ. ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವ್ಯಾಪಕ ಹಾನಿ ಸಂಭವಿಸಿದೆ.
ವೇಣೂರು ಗೋಳಿಯಂಗಡಿಯಿಂದ ಗುರುವಾಯನಕೆರೆಗೆ ಲಿನ್ಸ್ ಟಿ.ಡಿ. ಎಂಬವರು ಪಿಕ್ ಅಪ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ಪಡಂಗಡಿ ಸುಬೋಧ್ ಮಹಲ್ ಬಳಿ ಏಕಾಏಕಿ ಹೈಟೆನ್ಶನ್ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ವಿದ್ಯುತ್ ಲೈನ್ ತೆರವು ಮಾಡಿದ್ದಾರೆ.

Leave a Reply

Your email address will not be published. Required fields are marked *