`ಪಿಎಫ್ ಐ-ಎಸ್ ಡಿಪಿಐ ನಿಷೇಧಿಸಬೇಕು’ -ಸಚಿವ ಸುರೇಶ್ ಕುಮಾರ್

ಮೈಸೂರು:
ಬೆಂಗಳೂರಿನಲ್ಲಿ ನಡೆದಿರುವ ಗಲಭೆ ಖಂಡನೀಯವಾದುರು. ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ವ್ಯಾಪ್ತಿಯಲ್ಲಿ ಗಲಭೆ ಎಬ್ಬಿಸಿ ಸಾರ್ವಜನಿಕ ಸೊತ್ತುನಾಶ ಮಾಡಿರುವ ಘಟನೆಯಲ್ಲಿ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆಗಳು ಪಾಲ್ಗೊಂಡಿವೆ. ತನಿಖೆಯಲ್ಲಿ ಸಂಘಟನೆಗಳು ಗಲಭೆ ಸೃಷ್ಟಿ ಮಾಡಿದ್ದು ಬಯಲಿಗೆ ಬಂದಿರುವ ಕಾರಣ ಈ ಸಂಘಟನೆಗಳನ್ನು ತಕ್ಷಣವೇ ನಿಷೇಧಿಸಬೇಕು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದಿರುವ ಘಟನೆಗಳು ಇನ್ನು ಮುಂದೆ ರಾಜ್ಯದ ಎಲ್ಲೂ ನಡೆಯಲು ಬಿಡಬಾರದು. ಎಸ್ ಡಿಪಿಐಯಂತಹ ಸಂಘಟನೆಗಳನ್ನು ನಿಷೇಧಿಸಬೇಕೆಂಬುದು ಎಲ್ಲರ ಬೇಡಿಕೆ ಎಂದು ಹೇಳಿದರು. ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣಕ್ಕೆ ರಾಜ್ಯ ಸರಕಾರ ಶ್ರಮಿಸುತ್ತಿದೆ. ಇದಕ್ಕೆ ಧಕ್ಕೆಯುಂಟು ಮಾಡುವವರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ.