ಪಾಕ್ ಸುದ್ದಿ ವಾಹಿನಿಯಲ್ಲಿ ತ್ರಿವರ್ಣ ಧ್ವಜ ಹಾರಾಟ!

ನವದೆಹಲಿ: ಭಾರತದ ಸ್ವಾತಂತ್ರ್ಯೋವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಅತ್ತ ನೆರೆಯ ಪಾಕಿಸ್ತಾನದ ಸುದ್ದಿವಾಹಿನಿ ಡಾನ್ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಾಟದ ದೃಶ್ಯ ಪ್ರಸಾರವಾಗಿದ್ದು, ಅಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಡಾನ್ ಸಂಸ್ಥೆ ತಿಳಿಸಿದೆ. ಸದ್ಯ ತ್ರಿವರ್ಣ ಧ್ವಜ ಹಾರಾಟದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದ್ದಿ ವಾಹಿನಿ ಜಾಹೀರಾತು ಪ್ರಸಾರ ಮಾಡುತ್ತಿದ್ದ ಮಧ್ಯದಲ್ಲಿ ಪರದೆಯ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯದ ಜೊತೆ ತ್ರಿವರ್ಣ ಧ್ವಜವನ್ನು ಪ್ರಸಾರ ಮಾಡಲಾಗಿದೆ. ಡಾನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ” ಜಾಹೀರಾತು ಪ್ರಕಟಿಸುತ್ತಿದ್ದಾಗ ಏಕಾಏಕಿ ಭಾರತದ ತ್ರಿವರ್ಣ ಧ್ವಜ ಕಾಣಿಸಿ ಕೆಲವು ಸಮಯದ ನಂತರ ಕಾಣೆಯಾಯಿತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಕಳೆದ ತಿಂಗಳಲ್ಲಿ ಪಿಒಕೆ ಸರ್ಕಾರದ ವೆಬ್ ಸೈಟ್ ಕೂಡ ಹ್ಯಾಕ್ ಆಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಮಾಧ್ಯಮ ವರದಿಗಳ ಪ್ರಕಾರ ನಿನ್ನೆ ಮಧ್ಯಾಹ್ನ 3:30ಕ್ಕೆ ಪ್ರಸಾರವಾಗಿತ್ತು. ಸುದ್ದಿವಾಹಿನಿಯನ್ನು ಭಾರತೀಯ ಹ್ಯಾಕರ್ಗಳೇ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಪಾಕಿಸ್ತಾನದಲ್ಲಿ ಡಾನ್ ಸುದ್ದಿ ವಾಹಿನಿ ವಿರುದ್ಧ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕ್ಞಮೆ ಯಾಚನೆಗೆ ಆಗ್ರಹಿಸಿದ್ದಾರೆ.