`ಪವರ್ ಆಫ್ ಪಾಕಿಸ್ತಾನ’ ಪೇಜ್ ಶೇರ್ ಮಾಡಿ ತಗ್ಲಾಕ್ಕೊಂಡ ಪೊಲೀಸ್!

ದಾವಣಗೆರೆ: ನಗರದ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸನಾವುಲ್ಲಾ ಪವರ್ ಆಫ್ ಪಾಕಿಸ್ತಾನ' ಅನ್ನೋ ಪೇಜ್ ಅನ್ನು ಪೊಲೀಸ್ ಅಧಿಕಾರಿಗಳ ಗ್ರೂಪಲ್ಲೇ ಶೇರ್ ಮಾಡಿ ತಗ್ಲಾಕ್ಕೊಂಡಿದ್ದು ಜನರು ಪೊಲೀಸ್ ಸಿಬ್ಬಂದಿಯ ಪಾಕ್ ಪ್ರೇಮಕ್ಕೆ ಕಿಡಿಕಿಡಿಯಾಗಿದ್ದಾರೆ. ಸನಾವುಲ್ಲಾ ಹಲವು ಸಮಯಗಳಿಂದಪವರ್ ಆಫ್ ಪಾಕಿಸ್ತಾನ’ ಎನ್ನುವ ಪೇಜ್ ಶೇರ್ ಮಾಡುತ್ತಿದ್ದು ಇದನ್ನೇ ವಾಟ್ಸ್ ಆ್ಯಪ್ ಗ್ರೂಪ್ ನಲ್ಲೂ ಶೇರ್ ಮಾಡುತ್ತಿದ್ದ ದೂರು ಕೇಳಿಬಂದಿದೆ. ಶೇರ್ ಮಾಡುವಾಗ ಕೈತಪ್ಪಿ `2005 ಪೊಲೀಸ್ ಬ್ಯಾಚ್’ ಎಂಬ ಗ್ರೂಪ್ ನಲ್ಲಿ ಪೇಜ್ ಲಿಂಕ್ ಹರಿದಾಡಿದೆ. ಇದನ್ನು ಕಂಡು ಉಳಿದ ಸಿಬ್ಬಂದಿಗಳೇ ತರಾಟೆಗೆ ತೆಗೆದುಕೊಂಡಿದ್ದಾರೆ. ಸನಾವುಲ್ಲಾ ವಿರುದ್ಧ 2014ರಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಆತ ಮತ್ತೆ ಸೇವೆಗೆ ಹಾಜರಾಗಿದ್ದ. ಇಂಥ ಪೊಲೀಸ್ ಸಿಬ್ಬಂದಿ ಇಲಾಖೆಗೆ ಕಪ್ಪುಚುಕ್ಕೆ. ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.

Leave a Reply

Your email address will not be published. Required fields are marked *