ಪಳ್ಳಿ: ನೀರಿನ ಹೊಂಡಕ್ಕೆ ಟಿಪ್ಪರ್ ಪಲ್ಟಿ, ಇಬ್ಬರ ದುರ್ಮರಣ

ಮಂಗಳೂರು: ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಎಂಬಲ್ಲಿ ನೀರಿನ ಹೊಂಡವೊಂದಕ್ಕೆ ಉರುಳಿಬಿದ್ದು ಚಾಲಕ ಮತ್ತು ಕ್ಲೀನರ್ ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ. ಮೃತರನ್ನು ಚಾಲಕ ಅರುಣ್ ಕುಮಾರ್ ಮತ್ತು ಇನ್ನೊಬ್ಬರು ಎಂದು ಗುರುತಿಸಲಾಗಿದೆ.
ಅರುಣ್ ಕುಮಾರ್ ಪಳ್ಳಿಯಲ್ಲಿ ಅಶೋಕ್ ಬಸ್ಸಿನ ಚಾಲಕನಾಗಿದ್ದು ಬಸ್ ಸಂಚಾರವಿಲ್ಲದ ಕಾರಣ ಟಿಪ್ಪರ್ ಚಾಲಕರಾಗಿ ದುಡಿಯುತ್ತಿದ್ದರು. ಟಿಪ್ಪರ್ ಪಲ್ಟಿಯಾಗಿ ಅಡಿಯಲ್ಲಿ ಸಿಲುಕಿದ ಇಬ್ಬರೂ ಹೊರಬರಲಾರದೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *