ಪತ್ರ ಮುಖೇನ ಧೋನಿಗೆ ಪ್ರಧಾನಿ ಪ್ರಶಂಸೆ

ದೆಹಲಿ: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಧೋನಿ ಕ್ರಿಕೆಟ್‌ ಮೂಲಕ ಭಾರತಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ಸ್ಮರಿಸಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್ ಧೋನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಧಾನಿಯ ಈ ಪತ್ರಕ್ಕೆ ಎಂಎಸ್ ಧೋನಿ ಧನ್ಯವಾದವನ್ನು ಸಲ್ಲಿಸಿದ್ದಾರೆ. ಜೊತೆಗೆ ಪ್ರಧಾನಿಗಳ ಈ ಸ್ಪಂದನೆಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಎಂಎಸ್ ಧೋನಿ ಟ್ವಿಟ್ಟರ್‌ನಲ್ಲಿ “ಓರ್ವ ಕಲಾವಿದ, ಸೈನಿಕ ಹಾಗೂ ಕ್ರೀಡಾಪಟು ಇತರರಿಂದ ದೊರೆಯುವ ಮೆಚ್ಚುಗೆಗಾಗಿ ಹಂಬಲಿಸುತ್ತಿರುತ್ತಾನೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಎಲ್ಲರ ಗಮನಕ್ಕೆ ಬರುತ್ತಿದೆ ಹಾಗೂ ಮೆಚ್ಚುಗೆಗೆ ಒಳಪಡುತ್ತಿದೆ. ನಿಮ್ಮ ಶುಭ ಹಾರೈಕೆಗೆ ಹಾಗೂ ಮೆಚ್ಚುಗೆಗೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಯವರೇ” ಎಂದು ಬರೆದುಕೊಂಡಿದ್ದಾರೆ. “ಆಗಸ್ಟ್ 15 ರಂದು ನಿಮ್ಮ ಟ್ರೇಡ್‌ಮಾರ್ಕ್ ನಿರ್ಭಯ ಶೈಲಿಯಲ್ಲಿ ಚುಟುಕಾದ ವೀಡಿಯೊವೊಂದನ್ನು ಹಂಚಿಕೊಂಡಿದ್ದಿರಿ. ಅದು ಇಡೀ ದೇಶದ ದೊಡ್ಡ, ಭಾವೋದ್ರಿಕ್ತ ಚರ್ಚಾ ಕೇಂದ್ರವಾಗಲು ಸಾಕಾಗಿತ್ತು. 130 ಕೋಟಿ ಭಾರತೀಯರು ನಿರಾಶೆಗೊಂಡರು. ಆದರೆ ಕಳೆದ ಒಂದೂವರೆ ದಶಕದಲ್ಲಿ ನೀವು ಭಾರತೀಯ ಕ್ರಿಕೆಟ್‌ಗಾಗಿ ಮಾಡಿದ ಎಲ್ಲದಕ್ಕೂ ಶಾಶ್ವತವಾಗಿ ಕೃತಜ್ಞರಾಗಿರುತ್ತೇವೆ” ಎಂದು ಪತ್ರವನ್ನು ಪ್ರದಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ. ಎರಡು ಪುಟಗಳ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಧೋನಿ ಕ್ರಿಕೆಟ್‌ಗೆ ನೀಡಿದ ಕೊಡುಗೆ, ನಾಯಕತ್ವ ಹೀಗೆ ಸಾಕಷ್ಟು ಅಂಶಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ಗೆ ನೀಡಿದ ಸ್ಮರಣೀಯ ಕೊಡುಗೆಯ ಕಾರಣಕ್ಕಾಗಿ ಭಾರತೀಯರು ಸದಾ ಸ್ಮರಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಈ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *