ಪತ್ನಿ-ಮಗನಿಂದಲೇ ಹತ್ಯೆಗೀಡಾದ ಭಾಸ್ಕರ ಶೆಟ್ಟಿ ಆಸ್ತಿ ಹರಾಜಿಗೆ ಬ್ಯಾಂಕ್ ನೋಟಿಸ್!

ಮಲ್ಪೆ: ಪತ್ನಿ ಮತ್ತು ಮಗನಿಂದಲೇ ದಾರುಣವಾಗಿ ಹತ್ಯೆಗೀಡಾಗಿರುವ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಆಸ್ತಿಗಳನ್ನು ಹರಾಜು ಹಾಕಲು ಕರ್ನಾಟಕ ಬ್ಯಾಂಕ್ ಉಡುಪಿ ಶಾಖೆ ಸಾರ್ವಜನಿಕ ನೋಟಿಸ್ ಪ್ರಕಟಿಸಿದೆ. ಆಸ್ತಿ ಅಡಮಾನ ಇಟ್ಟು ಭಾಸ್ಕರ ಶೆಟ್ಟಿ ಮೂರು ಪ್ರತ್ಯೇಕ ಸಾಲ ಪಡೆದಿದ್ದು ಶೆಟ್ಟಿ ಹತ್ಯೆಯ ಬಳಿಕ ಅದನ್ನು ಪಾವತಿ ಮಾಡದ ಕಾರಣ ಬ್ಯಾಂಕ್ ಈ ಆಸ್ತಿಗಳನ್ನು ವಶಪಡಿಸಿಕೊಂಡಿದೆ. ಬಿಡ್‍ಗಳನ್ನು ಆಹ್ವಾನಿಸಿದ್ದು ಎರಡು ಅವಿಭಾಜ್ಯ ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡುವುದಾಗಿ ಬ್ಯಾಂಕ್ ತಿಳಿಸಿದೆ.
ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪವಿರುವ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್ ಭಾಸ್ಕರ್ ಶೆಟ್ಟಿ, ಪತ್ನಿ ರಾಜೇಶ್ವರಿ ಬಿ. ಶೆಟ್ಟಿ, ಮಗ ನವನೀತ್ ಬಿ. ಶೆಟ್ಟಿ ಮತ್ತು ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಟ್ಟಿ ಅವರ ಹೆಸರಿನಲ್ಲಿದೆ. ಮೂಡನಿಡಂಬೂರು ಗ್ರಾಮದಲ್ಲಿ 43 ಸೆಂಟ್ಸ್ ಭೂಮಿಯಲ್ಲಿರುವ ವಾಣಿಜ್ಯ ಆಸ್ತಿ 7.22 ಕೋಟಿ ರೂ., ಶಿವಳ್ಳಿ ಗ್ರಾಮದ ಸಾಗ್ರಿ ವಾರ್ಡ್‍ನಲ್ಲಿರುವ ಭಾಸ್ಕರ್ ಶೆಟ್ಟಿಗೆ ಸೇರಿದ 40 ಸೆಂಟ್ಸ್ ಭೂಮಿಯನ್ನು ಹರಾಜಿಗೆ ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *