ನಿತ್ಯಾನಂದನಿಂದ `ರಿಸರ್ವ್ ಬ್ಯಾಂಕ್ ಆಫ್ ಕೈಲಾಸ’ ಸ್ಥಾಪನೆ!

ಹೊಸದಿಲ್ಲಿ: ಸ್ವಯಂಘೋಷಿತ ದೇವಮಾನವ' ನಿತ್ಯಾನಂದನ ದ್ವೀಪ ರಾಷ್ಟ್ರ ಕೈಲಾಸದಲ್ಲಿ ನೆಲೆಸಿದ್ದು ಅಲ್ಲಿಯೇರಿಸರ್ವ್ ಬ್ಯಾಂಕ್ ಆಫ್ ಕೈಲಾಸ’ ಸ್ಥಾಪಿಸಿರುವ ಮಾಹಿತಿ ಬೆಳಕಿಗೆ ಬಂದಿದೆ. ತನ್ನ ಹೊಸ ಬ್ಯಾಂಕ್ ಕರೆನ್ಸಿಯನ್ನು ಗಣೇಶ ಚತುರ್ಥಿ ಹಬ್ಬದಂದು ಘೋಷಿಸಲಾಗುವುದೆಂದು ನಿತ್ಯಾನಂದ ಹೇಳಿದ್ದಾನೆ. ಆಶ್ರಮದಲ್ಲಿದ್ದ ಬಾಲಕಿಯರ ಅತ್ಯಾಚಾರ ಸಹಿತ ಹಲವಾರು ಆರೋಪ ಎದುರಿಸುತ್ತಿರುವ ನಿತ್ಯಾನಂದನ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ.
ವೀಡಿಯೋದಲ್ಲಿ ನಿತ್ಯಾನಂದ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ಕುರಿತು ಘೋಷಿಸುತ್ತಿರುವುದು ಹಾಗೂ ಅದರ ಆರ್ಥಿಕ ನೀತಿಗಳೂ ಸಿದ್ಧ ಎನ್ನುತ್ತಿರುವುದು ಕೇಳಿಸುತ್ತದೆ. ಆರ್ಥಿಕ ನೀತಿ, ಕರೆನ್ಸಿ ಎಕ್ಸ್‍ಚೇಂಜ್ ಕುರಿತ ಮಾಹಿತಿಗಳು ತಯಾರಿದೆ. ತಾನು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಕೈಲಾಸ ನಿರ್ವಹಿಸಲು ಒಂದು ದೇಶದ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದು ಕಾನೂನುಬದ್ಧ ಹಾಗೂ ಈಗಾಗಲೇ ಅದನ್ನು ಕಾನೂನುಬದ್ಧವಾಗಿ ಸ್ಥಾಪಿಸಲಾಗಿದೆ ಎಂದಿದ್ದಾನೆ.

Leave a Reply

Your email address will not be published. Required fields are marked *