ನಿಂದನೆ ಪ್ರಕರಣ: ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕೇಸ್

ಮಂಗಳೂರು: ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ವಿರುದ್ದ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಉಪನ್ಯಾಸಕಿ ಸವಿತಾ ಎಂಬುವವರು ಸಂವಿಧಾನ ನಿಂದನೆ ದೂರು ದಾಖಲಿಸಿದ್ದಾರೆ. ಸವಿತಾ ಎಂಬುವವರು ಕಳೆದ ಒಂದು ವರ್ಷಗಳ ಹಿಂದೆ ಮಳೆಗಾಲ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮನೆಗೆ ಹಾನಿಯಾಗಿದ್ದು ಮನೆ ದುರಸ್ತಿಗೆಗಾಗಿ ಸಹಾಯಧನ ಹಾಗೂ ನೆರವು ನೀಡುವಂತೆ ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಇದಾಗಿ ಒಂದು ವರ್ಷ ಕಳೆದರೂ ಪುರಸಭೆಯಿಂದ ಯಾವುದೇ ಪ್ರತ್ಯುತ್ತರ ಬರಲಿಲ್ಲ.
ಆ ಬಳಿಕ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ ಶೆಟ್ಟಿ ಭೇಟಿಯಾಗಿ ಸಹಾಯಧನ ನೀಡುವ ಬಗ್ಗೆ ವಿಚಾರಿಸಿದಾಗ ಈ ವೇಳೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಏಕಾಏಕಿಯಾಗಿ ಸಹಾಯಧನ ನೀಡಲು ಸಾಧ್ಯವಿಲ್ಲ. ನಿಮ್ಮ ಮನೆಯ ತೆರಿಗೆ ಬಾಕಿ ಇದೆ, 10 ಸಾವಿರ ರೂ. ದಂಡ ಪಾವತಿಸಿವಂತೆ ಸೂಚಿಸಿದ್ದಾರೆ. ಈ ವೇಳೆ ಹಣ ಕಟ್ಟಲು ಅಸಾಧ್ಯ ಎಂದಾಗ ಕಟ್ಟುವುದಾದರೆ ಕಟ್ಟಿ ಇಲ್ಲವಾದರೆ ಹೆಚ್ಚುವರಿ ತೆರಿಗೆ ಹಾಕಿ ಕಾನೂನು ಕ್ರಮ ಕೈಗೊಳ್ಳುವುದಾಗಿ ದರ್ಪದಿಂದ ವರ್ತಿಸಿದ್ದಾರೆ.
ಅಷ್ಟೇ ಅಲ್ಲದೆ ಸರಕಾರದಿಂದ ಪರಿಶಿಷ್ಟ ಜಾತಿ-ಪಂಗಡದವರಿಗೆ ಕೊಡುವ ಸವಲತ್ತು ಹೆಚ್ಚಾಗಿದ್ದು ಇವತ್ತು ನೀವು ನಮ್ಮನ್ನು ಪ್ರಶ್ನಿಸಿ ಮಾಡುತ್ತಿದ್ದೀರಿ, ಪುರಸಭೆಯಿಂದ ತಮಗೆ ಯಾವುದೇ ಸವಲತ್ತುಗಳನ್ನು ನೀವುದಿಲ್ಲ. ಗೆಟ್ ಔಟ್ ಎಂದು ನಿಂದಿಸಿರುವುದಾಗಿ ಸವಿತಾ ಕುಮಾರಿ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ. ಉಪನ್ಯಾಸಕಿಯಾದ ನನ್ನ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವುದು ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿರುವುದು ಅಸಂವಿಧಾನಿಕವಾಗಿದೆ. ಈ ಬಗ್ಗೆ ಅವರ ವಿರುದ್ಧ ಕೇಸ್ ದಾಖಲಿಸುವಂತೆ ದೂರು ನೀಡಿದ್ದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರೇಖಾ ಶೆಟ್ಟಿಯವರು ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *