ನಾಳೆಯಿಂದ ರಾಜ್ಯದ ದೇವಾಲಯಗಳಲ್ಲಿ ಸೇವೆ: ಅನ್ನದಾನವಿಲ್ಲ!

ಮಂಗಳೂರು: ರಾಜ್ಯದ ಎಲ್ಲಾ ದೇವಸ್ಥಾನಗಳಲ್ಲಿ ನಾಳೆಯಿಂದ ಆರಂಭಿಸಬಹುದು. ಅನ್ನದಾನ ಮತ್ತು ಯಾವುದೇ ರೀತಿಯ ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಮಾಧ್ಯಮಗಳ ಮುಂದೆ ಮಾತಾಡಿದ ಅವರು, `ಆರೋಗ್ಯ ಇಲಾಖೆಗೆ ಅನುಮತಿ ಕೋರಿದ್ದೇವೆ. ನಾಳೆಯಿಂದ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಸೇವೆ ಪ್ರಾರಂಭಿಸಬೇಕು’ ಎಂದರು.
ಕೊರೊನಾ ಮಾರ್ಗಸೂಚಿಯಂತೆ ನೂರಾರು ಜನರು ಸೇರುವ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದಿಲ್ಲ. 10-15 ಮಂದಿ ಸೇರಿ ಮಾಡುವಂತಹ ಧಾರ್ಮಿಕ ಸೇವೆ ನಡೆಸಲು ಮಾತ್ರ ಅವಕಾಶ ನೀಡುವ ಚಿಂತನೆ ಇದೆ. ಕೊರೊನಾ ನಿಯಮದ ಮಿತಿಯ ಒಳಗೆ ಎಲ್ಲಾ ಸೇವೆಗಳು ಇರುತ್ತದೆ ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *