ನಾಟೆಕಲ್: 6 ಅಂಗಡಿಗಳಲ್ಲಿ ಸರಣಿ ಕಳ್ಳತನ

ಮಂಗಳೂರು: ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಬಳಿ ನಿನ್ನೆ ರಾತ್ರಿ ಆರು ಅಂಗಡಿಗಳ ಬಾಗಿಲು ಮುರಿದ ಕಳ್ಳರು ಸರಣಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಎರಡು ಸೂಪರ್ ಬಝಾರ್, ಹಾರ್ಡ್‍ವೇರ್ ಅಂಗಡಿ, ಬೇಕರಿ, ಟಯರ್ ಅಂಗಡಿ, ಹಾಲಿನ ಡೈರಿ, ಚಿಕನ್ ಅಂಗಡಿಗಳ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಅಂಗಡಿಗಳಿಂದ ನಗದು ದೋಚಿರುವ ಮಾಹಿತಿ ಲಭಿಸಿದೆ. ಆದರೆ ಕಳ್ಳರಿಗೆ ಹೆಚ್ಚಿನ ನಗದು ದೊರೆತಿಲ್ಲ ಎನ್ನಲಾಗಿದೆ. ಕೊಣಾಜೆ ಠಾಣಾ ಪೊಲೀಸರು ಪರೀಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *