ನಬಿ ಮಾರಕ ಬೌಲಿಂಗ್‌: ಝೌಕ್ಸ್‌ಗೆ ಸುಲಭ ಗೆಲುವು

ಪೋರ್ಟ್‌ ಆಫ್‌ ಸ್ಪೇನ್‌: ಸ್ಟಾರ್‌ ಆಲ್‌ರೌಂಡರ್‌ ಮುಹಮ್ಮದ್‌ ನಬಿ ಪ್ರದರ್ಶಿಸಿದ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಇಲ್ಲಿ ನಡೆಯುತ್ತಿರುವ ಕೆರೇಬಿಯನ್‌ ಪ್ರೀಮಿಯರ್‌ ಲೀಗ್‌ನ ಸೈಂಟ್‌ ಕೀಟ್ಸ್‌ ಹಾಗೂ ನೆವಿಸ್‌ ಪ್ಯಾಟ್ರಿಯಾಟ್ಸ್‌ ವಿರುದ್ಧದ ಪಂದ್ಯದಲ್ಲಿ ಸೈಂಟ್‌ ಲೂಸಿಯಾ ಝೌಕ್ಸ್‌ ಆರು ವಿಕೆಟ್‌ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್‌ ನಡೆಸಿದ ನೀರಸ ಆರಂಭವನ್ನೇ ಪಡೆಯಿತು. ಅಲ್ಲದೆ ನಬಿ ದಾಳಿಗೆ ಸೂಕ್ತ ಉತ್ತರ ನೀಡುವಲ್ಲಿ ತಂಡ ಎಡವಿತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬೆನ್‌ (೩೩) ಹಾಗೂ ಬಾಲಂಗೋಚಿ ಅಲ್ಝಾರಿ ಜೋಸೆಫ್‌ (೨೧) ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ತಂಡದ ಮೊತ್ತ ನೂರರ ಗಡಿ ದಾಟುವಲ್ಲಿ ಸಾಧ್ಯವಾಯಿತು. ಅಂತಿಮವಾಗಿ ೨೦ ಓವರ್‌ಗಳಲ್ಲಿ ೯ ವಿಕೆಟ್‌ ನಷ್ಟಕ್ಕೆ ೧೧೦ ರನ್‌ ಗಳಿಸಿತು. ಝೌಕ್ಸ್‌ ಪರ ನಬಿ ಐದು ವಿಕೆಟ್‌ ಪಡೆದು ಮಿಂಚಿದರು.
ಗುರಿ ಬೆನ್ನತ್ತಿದ ಝೌಕ್ಸ್‌ ರಖೀಮ್‌ ಕಾರ್ನ್‌ವೆಲ್‌ ಸಿಡಿಲಬ್ಬರದ ಆರಂಭ ನೀಡಿದರು. ಕೇವಲ ೧೧ ಎಸೆತಗಳಲ್ಲಿ ೨ ಬೌಂಡರಿ ಹಾಗೂ ಮೂರು ಸಿಕ್ಸರ್‌ ನೆರವಿನಿಂದ ೨೬ ರನ್‌ ಗಳಿಸಿದ್ದ ವೇಳೆ ಕಾರ್ನ್‌ವೆಲ್‌ ನಿರ್ಗಮಿಸಿದರು. ಅಲ್ಲದೆ ಮತ್ತೊಬ್ಬ ಆರಂಭಿಕ ಆಂಡ್ರೆ ಫ್ಲೆಚರ್‌ (೧೬) ಕೂಡ ಕೆಲಹೊತ್ತು ಕ್ರೀಸ್‌ನಲ್ಲಿದ್ದರು. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿ ರೋಸ್ಟನ್‌ ಚೇಸ್‌ (ಅಜೇಯ ೨೭) ಹಾಗೂ ನಜೀಬುಲ್ಲಾ ಝದ್ರಾನ್‌ (೩೩) ಆಕರ್ಷಕ ಆಟ ಪ್ರದರ್ಶಿಸಿ ಹೆಚ್ಚಿನ ಹಾನಿಯಾಗದಂತೆ ನೋಡಿಕೊಂಡರು. ಅಂತಿಮವಾಗಿ ತಂಡ ೧೪.೪ ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ ೧೧೧ ರನ್‌ ಗಳಿಸಿ, ತಂಡ ಗೆಲುವು ಸಾಧಿಸಿತು. ನೆವಿಸ್‌ ಪ್ಯಾಟ್ರಿಯಾಟ್ಸ್‌ ಪರ ಇಮ್ರಾನ್‌ ಖಾನ್‌ ಮೂರು ವಿಕೆಟ್‌ ಪಡೆದರು.

Leave a Reply

Your email address will not be published. Required fields are marked *