ನಗ್ನ ದೇಹದ ಮೇಲೆ ಮಕ್ಕಳಿಂದಲೇ ಪೈಂಟ್ ಮಾಡಿಸಿದ್ದ ರೆಹನಾಗೆ ಮತ್ತೆ ಜಾಮೀನು ನಿರಾಕರಣೆ!

ತಿರುವನಂತಪುರಂ: ತನ್ನ ನಗ್ನ ದೇಹದ ಮೇಲೆ ತನ್ನದೇ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಪೈಂಟಿಂಗ್ ಮಾಡಿಸಿದ್ದ ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ತಿರಸ್ಕೃತಗೊಂಡಿದೆ. ರೆಹನಾ ಫಾತಿಮಾಗೆ ನಿರೀಕ್ಷಣಾ ಜಾಮೀನು ನೀಡದಿರುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ರೆಹನಾ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಳು. ಆದರೆ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿದೆ.
ವಿಡಿಯೋದಲ್ಲಿ ನಗ್ನತೆ ಇದ್ದರೂ ಅದು ಮಕ್ಕಳಿಗೆ ಶಿಕ್ಷಣ ನೀಡುವಂತೆ ಇದೆ, ಅದರಲ್ಲಿ ಯಾವುದೇ ಅಶ್ಲೀಲ, ಅನೈತಿಕವಾದ ದೃಶ್ಯಗಳಿಲ್ಲ. ಪುರುಷರಿಗೆ ಸ್ತ್ರೀಯರು ಸಮಾನವಾಗಿ ದೇಹದ ಮೇಲೆ ಈ ರೀತಿ ಚಿತ್ರಕಲೆ ಬಿಡಿಸಿಕೊಳ್ಳುವುದರಲ್ಲಿ ತಪ್ಪೇನು ಎಂಬುದಾಗಿ ರೆಹನಾ ಪರ ವಕೀಲರು ವಾದಿಸಿದ್ದರು. ವಾದವನ್ನು ತಿರಸ್ಕರಿಸಿದ ಜಡ್ಜ್ ಅರುಣ್ ಮಿಶ್ರಾ, ಲೈಂಗಿಕ ಶಿಕ್ಷಣ ಹೇಳಿ ಕೊಡಲು ಬೇರೆ ವಿಧಾನಗಳಿವೆ. ಈ ವಿಡಿಯೋ ಅಸಭ್ಯ ಎಂದು ಪರಿಗಣಿಸಲಾಗಿದೆ ಎಂದಿದ್ದಾರೆ. ರೆಹನಾ ಫಾತಿಮಾ ಕಳೆದ ವರ್ಷ ಅಯ್ಯಪ್ಪ ಸನ್ನಿಧಿ ಶಬರಿಮಲೆ ದೇಗುಲವನ್ನು ಪ್ರವೇಶಿಸಲು ಮುಂದಾಗಿ ವಿವಾದವನ್ನು ಮೈಗೆಳೆದುಕೊಂಡಿದ್ದರು. ಅವರು ಕೆಲಸ ಮಾಡುತ್ತಿದ್ದ ಬಿಎಸ್ಸನ್ನೆಲ್ ಸಂಸ್ಥೆಯಿಂದ ಅವರನ್ನು ವಜಾ ಮಾಡಲಾಗಿದೆ.

Leave a Reply

Your email address will not be published. Required fields are marked *