ದ.ಕ. ಜಿಲ್ಲೆಯಲ್ಲಿ ಭಾರೀ ಗಾಳಿ-ಮಳೆ, ವ್ಯಾಪಕ ಹಾನಿ

ಮಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಗಾಳಿ ಮಳೆಯಾಗುತ್ತಿದ್ದು ಬಿರುಗಾಳಿಗೆ ವಿವಿಧೆಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿ ವ್ಯಾಪಕ ಹಾನಿ ಸಂಭವಿಸಿದೆ. ನಗರದ ಬೋಳೂರು, ಪದವಿನಂಗಡಿಯಲ್ಲಿ ಮರಗಳು ಉರುಳಿದ್ದು ಮನೆಗಳಿಗೆ ಹಾನಿಯಾಗಿದೆ. ಉಳ್ಳಾಲದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದ್ದು ತೀರ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಕಾವೂರು ಪಂಜಿಮೊಗರು ಬಳಿ ರಸ್ತೆಗಡ್ಡವಾಗಿ ಮರ ಬಿದ್ದಿದ್ದು ಮೆಸ್ಕಾಂ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಬೆಳ್ತಂಗಡಿಯಲ್ಲಿ ಮನೆಗಳ ಮೇಲೆ ಮರವುರುಳಿ ಹಾನಿ ಸಂಭವಿಸಿದೆ. ಮರವೂರಿನಲ್ಲಿ ಮನೆ ಹಿಂಭಾಗದ ಬರೆ ಕುಸಿದು ಹಾನಿಯುಂಟಾಗಿದೆ. ಹರೇಕಳ, ಸಿದ್ದಕಟ್ಟೆ ಅಂಗನವಾಡಿ ಕೇಂದ್ರದ ಮೇಲೆ ತಂತಿಕಂಬ ಬಿದ್ದು ಕಟ್ಟಡಕ್ಕೆ ಹಾನಿಯುಂಟಾಗಿದೆ. ಬೆಳ್ತಂಗಡಿ, ಸುಬ್ರಹ್ಮಣ್, ಉಪ್ಪಿನಂಗಡಿ ಭಾಗದಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು ಜನರ ಆತಂಕ ಹೆಚ್ಚಿಸಿದೆ.

Leave a Reply

Your email address will not be published. Required fields are marked *