ತಾಲೂಕು ಪಂಚಾಯತ್ ಕೈ ಸದಸ್ಯ ನಿಗೂಡ ಕಣ್ಮರೆ ಬಿಜೆಪಿ ತೆಕ್ಕೆಗೆ ಮೂಡಬಿದ್ರೆ ತಾ. ಪಂಚಾಯತ್


ಮೂಡಬಿದ್ರೆ: ಬಿಜೆಪಿ-ಕಾಂಗ್ರೆಸ್ ಸಮಬಲದ ಮೂಲಕ ತೀವ್ರ ಕುತೂಹಲ ಮೂಡಿಸಿದ್ದ ಮೂಡಬಿದ್ರೆ ತಾಲೂಕು ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಕೈ ಸದಸ್ಯ ಓರ್ವನ ನಿಗೂಢ ಕಣ್ಮರೆ ಮೂಲಕ ಬಿಜೆಪಿ ಪಾಲಾಗುವ ಸಾಧ್ಯತೆ ಇದೆ.
ಮೂಡಬಿದ್ರೆ ತಾಲೂಕು ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಇಂದು ನಡೆಯಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ನಾಲ್ಕು ಸದಸ್ಯರನ್ನು ಹೊಂದಿದ್ದು, ಸಮಬಲ ಹೊಂದಿದೆ. ಸದ್ಯ ಕಾಂಗ್ರೆಸ್ ನ ಓರ್ವ ಕಣ್ಮರೆಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಪಡೆಯುವುದು ಬಹುತೇಕ ಖಚಿತಗೊಂಡಿದೆ. ಇದೇ ಮೊದಲ ಬಾರಿಗೆ ತಾಲೂಕು ಪಂಚಾಯತ್ ಮೂಡಬಿದ್ರೆಯಲ್ಲಿ ರಚನೆಯಾಗಿದ್ದು, ತಾಲೂಕಿನ ಪ್ರಥಮ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು ನಡೆಯಲಿದೆ.