ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಮಹಿಳಾ ಆಟಗಾರ್ತಿ!

ದೆಹಲಿ: ಮಧ್ಯಪ್ರದೇಶದ ಆಲ್ ರೌಂಡರ್ ಅಂಶುಲ ರಾವ್ ಅವರು ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ಪರೀಕ್ಷೆಯ ವೇಳೆ ಅಂಶುಲ ಉದ್ದೀಪನ ಮದ್ದು ಸೇವಿಸಿರುವುದು ಇದೀಗ ಕಂಡುಬಂದಿದೆ.
ಅಲ್ಲದೆ ಕಳೆದ ಆಗಸ್ಟ್‌ನಲ್ಲಿ ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿಯನ್ನು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದಲ್ಲಿ ತಂದ ಬಳಿಕ ಮಹಿಳಾ ಅಥವಾ ಪುರುಷ, ಜೂನಿಯರ್ ಅಥವಾ ಸೀನಿಯರ್ ಗಳಲ್ಲಿ ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದ ಭಾರತದ ಮೊದಲ ಕ್ರಿಕೆಟರ್ ಆಗಿಯೂ ಅಂಶುಲ ಗುರುತಿಸಿಕೊಂಡಿದ್ದಾರೆ. ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ಕೂಡ ಕಳೆದ ಜೂನ್‌ನಲ್ಲಿ ಕೆಮ್ಮಿಗೆ ಸೇವಿಸುವ ಮದ್ದು ವಿಪರೀತವಾಗಿ ಸೇವಿಸಿ ಡೋಪಿಂಗ್ ಆರೋಪ ಎದುರಿಸಿದ್ದರು. ನಿಷೇಧಕ್ಕೂ ಗುರಿಯಾಗಿದ್ದರು. ಆದರೆ ಆಗ ಬಿಸಿಸಿಐ ನಾಡಾದ ಜೊತೆ ಸೇರಿರಲಿಲ್ಲ. ಮೂಲವೊಂದರ ಪ್ರಕಾರ ಕಳೆದ ಮಾರ್ಚ್‌ನಲ್ಲಿ ಬರೋಡಾದಲ್ಲಿ ನಡೆದ ಪರೀಕ್ಷೆಯ ವೇಳೆ ಉದ್ದೀಪನ ಸೇವಿಸಿದ್ದು ಕಂಡು ಬಂದಿತ್ತು. ಆದರೆ ಪರೀಕ್ಷೆ ನಡೆದಿದ್ದು ಮನೆಯಲ್ಲೋ ಅಥವಾ ತರಬೇತಿಯ ವೇಳೆಯೋ ಅನ್ನೋದು ಸ್ಪಷ್ಟವಾಗಿಲ್ಲ.

Leave a Reply

Your email address will not be published. Required fields are marked *