ಡಾನ್ ರವಿ ಪೂಜಾರಿಗೂ ಕೊರೊನಾ! 14 ಸಿಸಿಬಿ ಅಧಿಕಾರಿಗಳಿಗೂ ಸೋಂಕು!!

ಬೆಂಗಳೂರು: ಹಫ್ತಾ ವಸೂಲಿ, ಸುಪಾರಿ ಕೊಲೆ, ಸುಲಿಗೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿದ್ದು ಬಳಿಕ ಕರ್ನಾಟಕ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಭೂಗತ ದೊರೆ ರವಿ ಪೂಜಾರಿಯಿಂದ ಸಿಸಿಬಿ ಪೊಲೀಸರಿಗೆ ದೊಡ್ಡ ತಲೆನೋವುಂಟಾಗಿದೆ. ಇತ್ತೀಚೆಗೆ ರವಿ ಪೂಜಾರಿಯನ್ನು ಮಂಗಳೂರಿನ ವಕೀಲ ನೌಶದ್ ಕಾಶಿಂಜಿ ಕೊಲೆ ಕೇಸ್ ಹಾಗೂ ಖಾಸಗಿ ಚಾನೆಲ್ ಮಾಲೀಕನ ಹಲ್ಲೆ ನಡೆಸಿದ ಪ್ರಕರಣದ ಸಲುವಾಗಿ ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಕರೆತಂದು ವಿಚಾರಣೆ ನಡೆಸಲಾಗಿತ್ತು.
ಮಡಿವಾಳ ಬಳಿಯಿರುವ ಸಿಸಿಬಿ ಕಚೇರಿಯಲ್ಲಿ ರವಿ ಪೂಜಾರಿಯನ್ನು ಕೊರೊನಾ ಸೋಂಕಿನ ಮುಂಜಾಗೃತಾ ಕ್ರಮ ಕೈಗೊಂಡು ವಿಚಾರಣೆ ನಡೆಸಲಾಗಿದೆ. ಇದೀಗ ಆತನನ್ನು ತನಿಖೆ ಮಾಡಿದ್ದ ಎಸಿಪಿ, ಇನ್ ಸ್ಪೆಕ್ಟರ್, ಟೈಪಿಸ್ಟ್ ಗೂ ಕೊರೊನಾ ಸೋಂಕು ತಗಲಿದ್ದು ಸದ್ಯ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೈಲಿನಲ್ಲಿ ಹಲವಾರು ಖೈದಿಗಳ ಜೊತೆ ಇದ್ದ ಕಾರಣ ಅವನಿಗೂ ಸೋಂಕು ತಗಲಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿಬಿ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬರ್ತಿದ್ದ ಹಾಗೆ ತನಿಖೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಹೀಗಾಗಿ ರವಿ ಪೂಜಾರಿಯ ತನಿಖೆ ಇನ್ನಷ್ಟು ಬಾಕಿ ಉಳಿದಿವೆ ಎಂದು ಅಧಿಕಾರಿಗಳು ಮತ್ತೆ ಆತನನ್ನು ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದರು. ಆದರೆ ಸಿಬ್ಬಂದಿಗೆ ಕೊರೊನಾ ಇರುವ ಕಾರಣ ತನಿಖೆಗೆ ಬ್ರೇಕ್ ಹಾಕಿದ್ದು, ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳು ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.
ಮುಂಬೈ ಪೊಲೀಸರು ನಿರಾಳ:
ಬೆಂಗಳೂರು ಸಿಸಿಬಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದ ರವಿ ಪೂಜಾರಿ ತನ್ನನ್ನು ಮುಂಬೈ ಪೊಲೀಸರಿಗೆ ನೀಡಬೇಡಿ ಎಂದು ಗೋಗರೆದಿದ್ದ. ಅಲ್ಲಿಗೆ ಕಳಿಸಿದ್ರೆ ನನ್ನನ್ನ ಎನ್ ಕೌಂಟರ್ ಮಾಡಿಬಿಡ್ತಾರೆ ಎಂದು ಅಳಲು ತೋಡಿಕೊಂಡಿದ್ದ. ಈಗ ಮುಂಬೈ, ಮಹಾರಾಷ್ಟ್ರದಲ್ಲಿ ಸೋಂಕು ಹೆಚ್ಚಾಗಿರುವ ಕಾರಣ ಅಲ್ಲಿನ ಪೊಲೀಸರು ಸುಮ್ಮನಾಗಿದ್ದು, ಅದರಿಂದಲೂ ರವಿ ಎಸ್ಕೇಪ್ ಆಗಿದ್ದಾನೆ. ಸದ್ಯ ಪರಪ್ಪನ ಅಗ್ರಹಾರ ಪ್ರತ್ಯೇಕ ರೂಂನಲ್ಲಿ ರವಿ ಪೂಜಾರಿ ಐಸೋಲೇಷನ್ ಮಾಡಲಾಗಿದೆ.

Leave a Reply

Your email address will not be published. Required fields are marked *