`ಜಮೀರ್ ಅಹ್ಮದ್ ಯಡಿಯೂರಪ್ಪರ ಗೇಟ್ ಕಾಯಲಿ’

ಬೆಂಗಳೂರು: ನಾನು ಎಸ್ಡಿಪಿಐಗೆ ಯಾವುದೇ ರೀತಿಯಲ್ಲಿ ಬೆಂಬಲ ನೀಡಿಲ್ಲ. ಬೇರೆಯವರಿಂದ ನಾವು ಪಾಠ ಕಲಿಯುವ ಅವಶ್ಯಕತೆ ಇಲ್ಲ. ಶಾಸಕ ಜಮೀರ್ ಅಹಮದ್ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ವಾಚ್ಮ್ಯಾನ್ ಆಗಲಿ' ಎಂದು ರೋಶನ್ ಬೇಗ್ ಜಮೀರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ಬೇಗ್ ಅವರು ಬಿಜೆಪಿ ಕಚೇರಿಯ ಕಸ ಗುಡಿಸಿದರೆ 2023ರಲ್ಲಿ ಬಿಜೆಪಿ ಟಿಕೆಟ್ ಸಿಗಬಹುದು ಎಂದು ಜಮೀರ್ ಲೇವಡಿ ಮಾಡಿದ್ದರು.
ಬೆಂಗಳೂರು ಗಲಭೆಯಲ್ಲಿ ಕೆಲವು ಮಂದಿ ಅಮಾಯಕರು ಇರಬಹುದು. ಅಂಥವರನ್ನು ಬಿಡಿ ಎಂದು ನಾನೇ ತಿಳಿಸಿದ್ದೆ. ಗಲಭೆಯಲ್ಲಿ ಕಾಂಗ್ರೆಸ್ಸಿಗರ ಕೈವಾಡವಿದೆ’ ಎಂದು ರೋಷನ್ ಬೇಗ್ ಆರೋಪಿಸಿದ್ದಾರೆ.