ಚಾರ್ಮಾಡಿ ಘಾಟ್ ಎರಡು- ಮೂರನೇ ತಿರುವಿನಲ್ಲಿ ಬಂಡೆಕಲ್ಲು ಕುಸಿತ ಸಂಚಾರ ವ್ಯತ್ಯಯ

ಬೆಳ್ತಂಗಡಿ: ಕಳೆದ ಮೂರು‌ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಚಾರ್ಮಾಡಿ ಘಾಟ್ ರಸ್ತೆಯ ಎರಡು ಮತ್ತು ಮೂರನೇ ತಿರುವುಗಳ ಮಧ್ಯೆ ಭೂಕುಸಿತ ಆಗಿದ್ದು ರಸ್ತೆ  ಮೇಲೆ‌‌ಯೇ‌ ಬಂಡೆಕಲ್ಲೊಂದು ಬಂದುಬಿದ್ದಿದೆ.
ಇದರಿಂದಾಗಿ ಕೆಲಗಂಟೆಗಳ ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಅಪದ್ಭಾಂಧವ ಚಾರ್ಮಾಡಿ ಹಸನಬ್ಬ ಅವರ ನೇತೃತ್ವದ ತಂಡದಲ್ಲಿ ಅವರ ಪುತ್ರ ಅಯಾಝ್ ಚಾರ್ಮಾಡಿ, ಮೂಡಿಗೆರೆಯ ಚಾಲಕ ಖಲೀಲ್ ಮತ್ತಿತೃ ತಂಡ ಕಲ್ಲನ್ನು ಅಲ್ಪ ಬದಿಗೆ ಸರಿಸಿ ಸಂಚಾರ ಸುಗಮಗೊಳಿಸಿದ್ದಾರೆ.ಅಂದಾಜು 30 ಕ್ಕಿಂತಲೂ ಹೆಚ್ಚು ವಾಹನಗಳು ಸಂಚಾರ ವ್ಯತ್ಯಯದಿಂದ ಸಿಲುಕಿಕೊಂಡಿದ್ದರು.ಇದಕ್ಕೂ‌ಮುನ್ಮ ತಂಡ ಲೋಕೋಪಯೋಗಿ ಇಲಾಖೆಯ ಶಿವಪ್ರಸಾದ ಅಜಿಲ ಅವರಿಗೆ ಮಾಹಿತಿ ನೀಡಿದ್ದು ರಾತ್ರಿಯೇ ಜೆಸಿಬಿ ಮೂಲಕ‌ ಕಾರ್ಯಾಚರಣೆ ವ್ಯವಸ್ಥೆ ಮಾಡಿಕೊಡುವುದಾಗಿ‌ ತಿಳಿಸಿದ್ದಾರೆ.ರಾತ್ರಿ7 ಗಂಟೆಯ ನಂತರ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ ಆದೇಶ ಜಾರಿಯಲ್ಲಿದ್ದು, ಬಳಿಕ ವಾಹನ ಸಂಚಾರ ತಡೆಯಲಾಗಿದೆ.

Leave a Reply

Your email address will not be published. Required fields are marked *