`ಗೋಲಿಬಾರ್ ಕ್ರಮ ಸರಿಯಾಗಿದೆ’ -ಗೃಹಸಚಿವ ಬೊಮ್ಮಾಯಿ

ಮಲ್ಪೆ:ಪರಿಸ್ಥಿತಿ ನಿಯಂತ್ರಣಕ್ಕೆ ಪಡೆಯಲು ಪೊಲೀಸರು ಗೋಲಿಬಾರ್ ನಡೆಸಲಾಯಿತು. ಪುಂಡರ ಉಪಟಳ ಮಿತಿಮೀರಿದಾಗ ಕಾನೂನು ಸುವ್ಯವಸ್ಥೆಯನ್ನು ಯಥಾಸ್ಥಿತಿಗೆ ತರುವಲ್ಲಿ ಪೊಲೀಸರ ಕ್ರಮ ಸರಿಯಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ’ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿಯವರು ಬೆಂಗಳೂರು ಗಲಭೆ ಕುರಿತು ಉಡುಪಿಯಲ್ಲಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರು. ಕಲ್ಲುತೂರಾಟದಿಂದಾಗಿ ಪೊಲೀಸರಿಗೂ ಗಾಯಗಳಾಗಿವೆ. ಓರ್ವ ಪೊಲೀಸ್ ತಲೆಗೆ ಗಂಭೀರ ಗಾಯವಾಗಿದೆ. ಈಗಾಗಲೇ 110ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಪರಿಸ್ಥಿತಿ ಹತೋಟಿಯಲ್ಲಿದೆ'' ಎಂದು ಹೇಳಿದ್ದಾರೆ. ಗಲಭೆ ಮರುಕಳಿಸದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಆರ್‍ಪಿಎಫ್ ಯೋಧರನ್ನು ಕರೆಸಲಾಗುತ್ತಿದೆ. ಮೂರು ಹೈದರಾಬಾದಿನಿಂದ ಹಾಗೂ ಮೂರು ಚೆನ್ನೈನಿಂದ ಕರೆಸಲಾಗುತ್ತಿದೆ. ಆರು ಕಂಪನಿಗಳನ್ನು ಎಲ್ಲಿ ನಿಯೋಜಿಸಬೇಕು ಎನ್ನುವುದನ್ನು ಪೊಲೀಸ್ ಅಧಿಕಾರಿಗಳು ತೀರ್ಮಾನ ಮಾಡುತ್ತಾರೆ. ರ್ಯಾಪಿಡ್ ಆಕ್ಷನ್ ಫೋಸ್ಟ್ ಕರೆಸಲಾಗುತ್ತಿದೆ’ ಎಂದು ಗೃಹಸಚಿವರು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *