ಗುಬ್ಬಿ: ವಿವಿಧ ಗ್ರಾಮಗಳ ಗುದ್ದಲಿ ಪೂಜೆಗೆ ಶಾಸಕ ಮಸಾಲಾ ಜಯರಾಂ ಗುದ್ದಲಿಪೂಜೆ

ಗುಬ್ಬಿ: ತಾಲೂಕಿನ ಸಿ.ಎಸ್. ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ಪಂಚಾಯತ್ ರಾಜ್ ಇಲಾಖೆಯ 5054 ವಿಶೇಷ ಯೋಜನೆಯ 2 ಕೋಟಿ ರೂ.ಗಳ ವಿವಿಧ ಗ್ರಾಮಗಳ ಸಿಸಿ ರಸ್ತೆಗೆ ತುರುವೇಕೆರೆ ಶಾಸಕ ಮಸಾಲಾ ಜಯರಾಂ ಸಾಂಕೇತಿಕ ಗುದ್ದಲಿಪೂಜೆ ನೆರವೇರಿಸಿದರು. ನನಗೆ ಸಂಬಂಧವಿಲ್ಲದ ಒತ್ತುವರಿ ತೆರವು ಪ್ರಕರಣವನ್ನು ಮುಂದಿಟ್ಟುಕೊಂಡ ನಿರುದ್ಯೋಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೆಟ್ಟ ರಾಜಕಾರಣ ಮಾಡುತ್ತಾ ತುರುವೇಕೆರೆ ಕ್ಷೇತ್ರದ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ದೂರಿದರು.
ತಾಲೂಕಿನ ಸಿ.ಎಸ್. ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ಶುಕ್ರವಾರ ಪಂಚಾಯತ್ ರಾಜ್ ಇಲಾಖೆಯ 5054 ವಿಶೇಷ ಯೋಜನೆಯ 2 ಕೋಟಿ ರೂ.ಗಳ ವಿವಿಧ ಗ್ರಾಮಗಳ ಸಿಸಿ ರಸ್ತೆಗೆ ಸಾಂಕೇತಿಕ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತೆ ನನ್ನ ಮೇಲೆ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಹತ್ತಾರು ಪ್ರಕರಣದಲ್ಲಿ ಕೃಷ್ಣಪ್ಪ ಅವರ ಹೆಸರು ರಾರಾಜಿಸುತ್ತಿದೆ. ನನ್ನ ಮೇಲೆ ಒಂದು ಪ್ರಕರಣವಿದ್ದಲ್ಲಿ ತೋರಿಸಲಿ. ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಕೊಳಕು ರಾಜಕಾರಣವನ್ನು ಮುಗ್ದ ರೈತರನ್ನು ಬಳಸಿಕೊಂಡು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಳೆದ 15 ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ಜನರನ್ನು ಎತ್ತಿಕಟ್ಟಿ ಗುಂಪು ರಾಜಕಾರಣ ಮಾಡುತ್ತಾ ಬಂದ ಅವರು ಸ್ವಪಕ್ಷೀಯ ಮುಖಂಡರ ವಿರುದ್ದ ವೈಷ್ಯಮ್ಯ ಕಟ್ಟಿಕೊಂಡ ಕಥೆ ಎಲ್ಲಿರಿಗೂ ತಿಳಿದಿದೆ. ಎರಡು ವರ್ಷದಲ್ಲಿ ಸತತವಾಗಿ ಅಭಿವೃದ್ದಿ ಕೆಲಸವನ್ನು ನಡೆಸುತ್ತಾ ಜನರ ಪ್ರೀತಿ ಗಳಿಸುತ್ತಿರುವ ನನ್ನ ಬಗ್ಗೆ ಅಸೂಯೆ ವ್ಯಕ್ತಪಡಿಸಲು ಸಲ್ಲದ ಕಾರಣ ಹುಡುಕಿಕೊಂಡಿದ್ದಾರೆ. ಒತ್ತುವರಿ ತೆರವು ಕೆಲಸ ಅಧಿಕಾರಿಗಳು ಮಾಡುತ್ತಾರೆ. ಇಲ್ಲ ನನ್ನ ಪಾತ್ರ ಏನೋ ಇಲ್ಲ ಎಂಬ ಬಗ್ಗೆ ಅದೇ ಗ್ರಾಮದ ರೈತರು ಸ್ಪಷ್ಟನೆ ನೀಡಿದ್ದಾರೆ. ರೈತಸಂಘ ಕೂಡಾ ಇಲ್ಲಿನ ವಾಸ್ತವ ತಿಳಿದುಕೊಂಡಿದೆ. ಪ್ರತಿಭಟನೆ ಗುಡ್ಡೇನಹಳ್ಳಿ ಗ್ರಾಮಸ್ಥರಿಗೆ ಬೇಕಿಲ್ಲದಿದ್ದರೂ ಇವರ ಅಸ್ತಿತ್ವದ ಉಳಿವಿಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಲ್ಲಿಯೇ ಒಕ್ಕಲೆಬ್ಬಿಸುವ ಬುದ್ದಿ ಯಾರದು ಎಂದು ಜನರಿಗೆ ತಿಳಿಯುತ್ತದೆ ಎಂದರು.
ಹೇಮಾವತಿ ನೀರು ಕ್ಷೇತ್ರದಲ್ಲಿ ಎರಡು ಬಾರಿ ಹರಿದು ಬಹುತೇಕ ಕೆರೆಗಳು ತುಂಬಿಕೊಂಡಿತ್ತು. ನಂತರದಲ್ಲಿ ಸಿಸಿ ರಸ್ತೆಗಳು ಎಲ್ಲಾ ಗ್ರಾಮದಲ್ಲೂ ನಿರ್ಮಾಣ ಮಾಡುತ್ತಿದ್ದೇನೆ. ಗ್ರಾಮಗಳ ಸಂಪರ್ಕ ರಸ್ತೆಗಳೂ ಸಹ ಅಚ್ಚಕಟ್ಟಾಗಿ ನಿರ್ಮಿಸಿದ ಬಗ್ಗೆ ತಿಳಿದ ಮಾಜಿ ಶಾಸಕರು ತಮ್ಮ ವರ್ಚಸ್ಸು ಕ್ಷೀಣಿಸಿದೆ ಎಂದು ಅರಿವಿಗೆ ಬಂದು ಕ್ಷೇತ್ರ ಶಾಂತಿ ಕದಡಲು ಸತತ ಪ್ರಯತ್ನಪಟ್ಟು ಈಗ ಗುಡ್ಡೇನಹಳ್ಳಿ ಘಟನೆಯನ್ನು ಅಸ್ತ್ರವಾಗಿ ಮಾಡಿಕೊಳ್ಳುತ್ತಿದ್ದಾರೆ. 144 ಸೆಕ್ಷನ್ ಜಾರಿ ಇರುವ ಸಂದರ್ಭದಲ್ಲಿ ಪ್ರತಿಭಟನೆಗೆ ಮುಂದಾದ ಕೃಷ್ಣಪ್ಪ ಅವರ ಬಗ್ಗೆ ಜನರೇ ತಿಳಿದುಕೊಳ್ಳುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು, ನನ್ನ ಬೆಂಬಲಿಗರಲ್ಲಿ ಮನವಿ ಮಾಡಿ ಶಾಂತಿ ಕಾಪಾಡಲು ಸೂಚಿಸಿದ್ದೇನೆ. ಆದರೆ ನನ್ನ ಅಭಿಮಾನಿಗಳು ಅವ್ಯಾಚ್ಯ ಶಬ್ದ ಬಳಕೆಗೆ ಮಾಜಿ ಶಾಸಕ ಕ್ಷಮೆಯಾಚಲಿ ಎಂದು ಪಟ್ಟು ಹಿಡಿದಿದ್ದಾರೆ ಎಂದರು. ಮಾಜಿ ಶಾಸಕ ಎಂ.ಟಿ.ಕೆ ವಿರುದ್ಧ ಶಾಸಕ ಮಸಾಲ ಜಯರಾಂ ನಿರುದ್ಯೋಗ ಮಾಜಿ ಶಾಸಕ ಆತನಿಗೆ ಬೇರೆ ಏನು ಕೆಲಸವಿಲ್ಲ ಜೊತೆಗೆ ತಮ್ಮ ಪಕ್ಷದ ಮುಖಂಡರ ಮೆಚ್ಚಿಗೆಗಾಗಿ ಈರೀತಿ ಎದ್ದುಕಟ್ಟುವ ಕೆಲಸ ಮಾಡುತ್ತಾ ಇದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸಿ.ಎಸ್.ಪುರ ಹೋಬಳಿ ಬಿಜೆಪಿ ಅಧ್ಯಕ್ಷ ಇಡಗೂರು ರವಿ, vssಟಿ ಅಧ್ಯಕ್ಷ ನಾಗರಾಜ್, ದೇವರಾಜು, ಮಹೇಶ್, ಚಂದ್ರಣ್ಣ, ಹೊನ್ನಪ್ಪ, ಮಹೇಶ್, ಪಿಡಿಓ ತಿಮ್ಮೇಗೌಡ ಇತರರು ಇದ್ದರು.

Leave a Reply

Your email address will not be published. Required fields are marked *