ಗಾಳಕ್ಕೆ ಸಿಲುಕಿದ ಅಪರಿಚಿತ ಶವ!

ಮಲ್ಪೆ: ಗಾಳ ಹಾಕಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೀನಿನ ಬದಲು ಅಪರಿಚಿತ ಗಂಡಸಿನ ಶವ ಗಾಳಕ್ಕೆ ಸಿಲುಕಿದ ಘಟನೆ ನಿನ್ನೆ ತಡರಾತ್ರಿ ಮೂಡನಿಡಂಬೂರು ಗರಡಿ ಸಮೀಪ ನಡೆದಿದೆ.
ಇಂದ್ರಾಣಿ ನದಿಯ ದಡದಲ್ಲಿ ವ್ಯಕ್ತಿಯೊಬ್ಬರು ಗಾಳ ಹಾಕುತ್ತಿದ್ದ ವೇಳೆ ಗಾಳಕ್ಕೆ ಭಾರೀ ಭಾರದ ವಸ್ತು ಸಿಕ್ಕಿಕೊಂಡಿದ್ದು ಅವರು ಮೀನು ಎಂದು ಭಾವಿಸಿ ಎಳೆಯಲು ಪ್ರಯತ್ನಿಸಿದ್ದು ಈ ಸಂದರ್ಭ ಅಪರಿಚಿತ ವ್ಯಕ್ತಿಯ ಶವ ಕಂಡು ಭಯಗೊಂಡು ಗಾಳವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಘಟನೆ ಸ್ಥಳೀಯರ ಗಮನಕ್ಕೆ ಬಂದಿದ್ದು ಸ್ಥಳಕ್ಕೆ ಧಾವಿಸಿದ ನಗರ ಠಾಣಾಧಿಕಾರಿ ಸಕ್ತಿವೇಲು ಹಾಗೂ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಶವವನ್ನು ಮೇಲಕ್ಕೆತ್ತಿದ್ದಾರೆ. ಶವದ ಗುರುತು ಪತ್ತೆ ಲಭಿಸಿಲ್ಲ.

Leave a Reply

Your email address will not be published. Required fields are marked *