ಖ್ಯಾತ ಭೋಜ್ ಪುರಿ ನಟಿ ಆತ್ಮಹತ್ಯೆ

Bhojpuri actress Anupama Pathak commits suicide in Mumbai
ಮುಂಬೈ: ಭೋಜ್ಪುರಿ ನಟಿ ಅನುಪಮಾ ಪಾಠಕ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಮೀರಾರೋಡ್ ಪ್ರದೇಶದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 40ರ ಹರೆಯದ ಅನುಪಮಾ ರವಿವಾರ ತನ್ನ ಬಾಡಿಗೆ ಫ್ಲಾಟ್ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬಿಹಾರದಿಂದ ಮುಂಬೈಗೆ ಬಂದಿದ್ದ ಅವರು ಹಲವು ಭೋಜ್ಪುರಿ ಚಿತ್ರ ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಆತ್ಮಹತ್ಯೆಯ ಮುಂಚಿನ ದಿನ ಫೇಸ್ಬುಕ್ ವೀಡಿಯೊವೊಂದನ್ನು ಹಂಚಿಕೊಂಡಿದ್ದ ಅವರು ನನಗೆ ವಂಚನೆ ಆಗಿದೆ. ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದ್ದರು. ಡೆತ್ ನೋಟ್ ಪತ್ತೆಯಾಗಿಲ್ಲ.