ಕ್ಲಬ್ ಮೇಲೆ ಪೊಲೀಸರ ದಾಳಿ: ಕಾಲ್ತುಳಿತಕ್ಕೆ 13 ಮಂದಿ ಸಾವು

ಲಿಮಾ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೆರು ದೇಶದಲ್ಲಿ ಲಾಕ್‍ಡೌನ್ ಹೇರಲಾಗಿದೆ. ಬಾರ್, ನೈಟ್ ಕ್ಲಬ್ ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಆದರೆ ರಾಜಧಾನಿ ಲಿಮಾ ನಗರದ ಪಾಸ್ ಓಲಿವೋಸ್ ಪ್ರದೇಶದಲ್ಲಿ ಥಾಮಸ್ ರೆಸ್ಟೋಬಾರ್ ಕ್ಲಬ್ ನಲ್ಲಿ ನೂರಾರು ಮಂದಿ ಕುಡುಕರು ಗುಟ್ಟಾಗಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೆರು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ 13 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ.
ಎರಡನೇ ಮಹಡಿಯಲ್ಲಿದ್ದ ಕ್ಲಬ್‍ನ ಮುಖ್ಯದ್ವಾರ ತುಂಬಾ ಚಿಕ್ಕದಾಗಿದ್ದು ನೂರಕ್ಕೂ ಹೆಚ್ಚು ಜನರು ಇದೇ ಬಾಗಿಲಿನಿಂದ ಓಡಿಹೋಗಲು ಯತ್ನಿಸಿದ್ದಾರೆ. ಈ ವೇಳೆ ಹಲವರು ಪ್ರಾಣ ಕಳೆದುಕೊಂಡಿದ್ದರೆ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ವ್ಯಕ್ತವಾಗಿದೆ. ದಾಳಿ ಸಂದರ್ಭ ಕುಡುಕರು ಮತ್ತು ಪೊಲೀಸರ ಮಧ್ಯೆ ಭಾರೀ ಹೊಡೆದಾಟವೂ ನಡೆದಿದೆ. ಪೆರು ಸರ್ಕಾರ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಸೂಕ್ತ ತನಿಖೆಗೆ ಆದೇಶಿಸಿದೆ.

Leave a Reply

Your email address will not be published. Required fields are marked *