ಕ್ರೇನ್ ಬಿದ್ದು 10 ಮಂದಿ ಮೃತ್ಯು!

ವಿಶಾಖಪಟ್ಟಣಂ: ಇಲ್ಲಿನ ಹಿಂದೂಸ್ತಾನ್ ಶಿಪ್‍ಯಾರ್ಡ್ ನಲ್ಲಿ ದುರ್ಘಟನೆಯೊಂದು ಜರುಗಿದ್ದು ಭಾರೀ ಗಾತ್ರದ ಕ್ರೇನ್ ಮುರಿದುಬಿದ್ದ ಪರಿಣಾಮ ಅದರಡಿ ಸಿಲುಕಿದ 10 ಮಂದಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಘಟನೆ ನಡೆದಿದ್ದು ಓರ್ವ ಕಾರ್ಮಿಕ ಗಂಭೀರ ಗಾಯಗೊಂದ್ದಾಗಿ ಡಿಸಿಪಿ ಸುರೇಶ್ ಬಾಬು ಸ್ಪಷ್ಟಪಡಿಸಿದ್ದಾರೆ. ಆಂಧ್ರಪ್ರದೇಶದ ವಿಜಗ್ ನಗರದಲ್ಲಿ ಘಟನೆ ಸಂಭವಿಸಿದೆ. ಹಿಂದೂಸ್ತಾನ್ ಶಿಪ್ ಯಾರ್ಡ್ 10 ವರ್ಷಗಳ ಹಿಂದೆ ಕ್ರೇನ್ ಖರೀದಿ ಮಾಡಿತ್ತೆನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *