ಕ್ಯಾನ್ಸರ್ ಚಿಕಿತ್ಸೆ ಲಯನ್ಸ್ ಕ್ಲಬ್ ನೆರವು

ಮಂಗಳೂರು: ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಇವರು ವೈಯುಕ್ತಿಕ ನೆಲೆಯಲ್ಲಿ ಕೊಡಮಾಡಿದ ಹತ್ತು ಸಾವಿರ ರೂಪಾಯಿಗಳ ಚೆಕ್ ಅನ್ನು 74ನೇ ಸ್ವಾತಂತ್ರ್ಯ ದಿನದಂದು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅಡ್ಯಾರ್ ನಿವಾಸಿ ಸುಗಂಧಿ ಅವರ ಚಿಕಿತ್ಸೆಗಾಗಿ ಪುತ್ರ ಅಜಿತ್ ಪೂಜಾರಿ ಅವರಿಗೆ ಹತ್ತು ಸಾವಿರ ರೂಪಾಯಿಗಳ ಚೆಕ್ ಅನ್ನು ನಿವೃತ್ತ ಸೈನಿಕ ಲಯನ್ ರಾಘವೇಂದ್ರ ಭಟ್ ಮೂಲಕ ಹಸ್ತಾಂತರಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸತೀಶ್ ರೈ, ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಲಿಯೋ ಮಾಜಿ ಅಧ್ಯಕ್ಷೆ ಅನಿತಾ ವಿ.ಡಿಸೋಜ ಉಪಸ್ಥಿತರಿದ್ದರು.