ಕೊರೊನಾ ಸೋಂಕಿಗೆ ಹೆದರಿ ಊರು ತೊರೆದರು!

ಹೊಸಕೋಟೆ: ತಾಲೂಕಿನ ಸೂಲಿಬೆಲೆ ಹೋಬಳಿಯ ಯನಗುಂಟೆ ಗ್ರಾಮದಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚೆಚ್ಚು ಬೆಳಕಿಗೆ ಬರುತ್ತಿದ್ದು ಇದರಿಂದ ಹೆದರಿದ ಜನರು ಊರು ತೊರೆಯುತ್ತಿದ್ದಾರೆ. ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಯನಗುಂಟೆಯಲ್ಲಿ ಮೂರು ಕೊರೊನಾ ಸೋಂಕು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದರಿಂದ ಹೆದರಿದ ಅಕ್ಕಪಕ್ಕದ ನಿವಾಸಿಗಳು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಗ್ರಾಮದಲ್ಲಿದ್ದರೆ ತಮಗೂ ಸೋಂಕು ಹರಡಬಹುದು ಎಂದು ಭಾವಿಸಿರುವ ಗ್ರಾಮಸ್ಥರು ಊರು ತೊರೆಯುತ್ತಿರುವ ವರದಿಯಾಗಿದೆ.
ಜನರಲ್ಲಿ ಸ್ಥಳೀಯಾಡಳಿತದ ಅಧಿಕಾರಿಗಳು ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗುತ್ತಿಲ್ಲ. ಗ್ರಾಮದ ಕೆಲ ಪ್ರದೇಶಗಳು ಸೀಲ್‍ಡೌನ್ ಆಗಿದ್ದು ಅಂಗಡಿ ಮುಂಗಟ್ಟುಗಳು ತೆರೆಯಿತ್ತಿಲ್ಲ. ದಿನ ಬಳಕೆ ವಸ್ತುಗಳಿಗೆ ಪರದಾಟ ನಡೆಸುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *