ಕೊರೊನಾ ಭೀತಿ: ಐವನ್ ಜೊತೆಗಿದ್ದ ಖಾದರ್ ಸೆಲ್ಫ್ ಕ್ವಾರಂಟೈನ್

ಮಂಗಳೂರು: ಮಾಜಿ ಪರಿಷತ್ ಸದಸ್ಯ ಐವನ್ ಡಿಸೋಜಾಗೆ ಕೊರೊನಾ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ ಮಾಜಿ ಸಚಿವ ಖಾದರ್ ಸ್ವಯಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ.
ಭಾನುವಾರ ನಿಗದಿಯಾಗಿದ್ದ ಜನಸಾಮಾನ್ಯರ ಭೇಟಿ, ವಿವಿಧ ಕಾರ್ಯಕ್ರಮ ಮುಂದೂಡಿದ್ದಾರೆ.
ಐವನ್ ಅವರು ಡಿಕೆಶಿ ಭೇಟಿ ನೀಡಿದ್ದ ಸಂದರ್ಭ ಅವರೊಂದಿಗೆ ಹಲವಾರು ಕಾರ್ಯಕ್ರಮಗಳಲ್ಲಿ ತೊಡಗಿದ್ದು, ಇದು ಭಾರೀ ಆತಂಕಕ್ಕೆ ಕಾರಣವಾಗಿದೆ. ಕೆಲವು ಹಿರಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂರಾರು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. ಭಾಗವಹಿಸಿದ ಎಲ್ಲರೂ ಕ್ವಾರಂಟೈನ್ಗೆ ಒಳಗಾಗಬೇಕೆಂಬ ಒತ್ತಾಯ ಕೇಳಿಬಂದಿದೆ.
