ತೊಕ್ಕೊಟ್ಟು ಕೌನ್ಸಿಲರ್ ಗೆ ಕೊರೊನಾ ನೆಗೆಟಿವ್! ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು!

ಮಂಗಳೂರು: `ಖೋಡೇಸ್ ರಮ್, ಎಗ್ ಹಾಫ್ ಬಾಯಿಲ್ ಸೇವಿಸಿದ್ರೆ ಕೊರೊನಾ ಬರಲ್ಲ’ ಎಂದಿದ್ದ ಉಳ್ಳಾಲ ಕೌನ್ಸಿಲರ್ ಓರ್ವರಿಗೂ ಕೊರೊನಾ ತಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದ್ದು ಇದನ್ನು ಕಿಡಿಗೇಡಿಗಳು ಹಬ್ಬಿಸಿದ್ದಾರೆ ಎನ್ನಲಾಗಿದೆ. ಕೌನ್ಸಿಲರ್ ಆರೋಗ್ಯವಾಗಿದ್ದಾರೆ.
ಕೆಲವು ದಿನಗಳ ಹಿಂದೆ ಇವರು ವಿಡಿಯೋ ಸಂದೇಶವನ್ನು ಹರಿಯಬಿಟ್ಟಿದ್ದು ಅದರಲ್ಲಿ ಕೊರೊನಾ ರೋಗಕ್ಕೆ ಖೋಡೇಸ್ ರಮ್ ಮದ್ದು. ಅದರ ಜೊತೆ ಮೊಟ್ಟೆಯನ್ನು ಅರೆಬೇಯಿಸಿ ಸೇವಿಸಿ. ಯಾವ ಕೊರೊನಾ ಕೂಡಾ ಹತ್ತಿರ ಸುಳಿಯಲ್ಲ ಎಂದಿದ್ದರು. ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಷ್ಟ್ರೀಯ ಚಾನೆಲ್ ಗಳಲ್ಲೂ ವರದಿ ಪ್ರಕಟವಾಗಿತ್ತು.