ಕುಂಬಳೆ: ಮಾರಕಾಸ್ತ್ರಗಳಿಂದ ಕಡಿದು ಯುವಕನ ಬರ್ಬರ ಹತ್ಯೆ!

ಕಾಸರಗೋಡು: ಯುವಕನನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕಡಿದು ಬರ್ಬರ ಹತ್ಯೆಗೈದ ಘಟನೆ ಮಧ್ಯರಾತ್ರಿ ಕುಂಬಳೆ ಠಾಣಾ ವ್ಯಾಪ್ತಿಯ ನಾಯ್ಕಾಪು ಎಂಬಲ್ಲಿ ನಡೆದಿದೆ. ಹರೀಶ್(38) ಹತ್ಯೆಯಾದ ದುರ್ದೈವಿ.
ಘಟನೆ ವಿವರ:
ನಾಯ್ಕಾಪು ಭಗವತಿ ಮಿಲ್ ನಲ್ಲಿ ಕಳೆದ 15 ವರ್ಷಗಳಿಂದ ಕಾರ್ಮಿಕನಾಗಿರುವ ಹರೀಶ್ ಮೇಲೆ ಮನೆ ಸಮೀಪ ತಂಡವೊಂದು ದಾಳಿ ನಡೆಸಿ ಕೊಚ್ಚಿ ಕೊಲೆಗೈದು ಪರಾರಿಯಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹರೀಶ್ ಸಾವನ್ನಪ್ಪಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *