ಕುಂದಾಪುರ: ಗಾಂಜಾ ಮಾರಾಟ, ಇಬ್ಬರ ಸೆರೆ

ಕುಂದಾಪುರ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜಿಲ್ಲಾ ಡಿಸಿಐಬಿ ಪೊಲೀಸರು ಅವರ ಬಳಿ ಇದ್ದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಕುಂದಾಪುರದ ಮಹ್ಮದ್ ತನ್ವೀರ್ ಹಾಗೂ ಸಬೀಬ್ ಎಂದು ಹೆಸರಿಸಲಾಗಿದೆ. ಒಂದು ಕೆಜಿ ಐವತ್ತು ಗ್ರಾಂ ಗಾಂಜಾ ಮತ್ತು 2 ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕುಮಾರ್ ಚಂದ್ರ, ಟಿ.ಆರ್ ಜಯಶಂಕರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ ಸ್ಪೆಕ್ಟರ್ ಮಂಜಪ್ಪ ಹಾಗೂ ಎಎಸ್‍ಐ ರವಿಚಂದ್ರ ಮತ್ತು ಅವರ ಸಿಬ್ಬಂದಿಗಳಾದ ರಾಮು ಹೆಗ್ಡೆ, ಚಂದ್ರ ಶೆಟ್ಟಿ, ಸುರೇಶ್,ಸಂತೋಷ ಕುಂದರ್,ರಾಘವೇಂದ್ರ ಉಪ್ಪುಂದ,ರಾಜ್ ಕುಮಾರ್, ದಯಾನಂದ ಪ್ರಭು, ಶಿವಾನಂದ ಹಾಗೂ ಚಾಲಕ ರಾಘವೇಂದ್ರ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.