ಕಿನ್ಯ ಸರಕಾರಿ ಶಾಲಾ ದುರಸ್ತಿಗೆ ಕ್ಯಾಂಪಸ್ ಫ್ರಂಟ್ ಒತ್ತಾಯ

ಮಂಗಳೂರು: ತೀರಾ ಶಿಥಿಲಾವಸ್ಥೆಯನ್ನು ತಲುಪಿರುವ ಮಂಜನಾಡಿ ಸಮೀಪದ ಕಿನ್ಯ ಸರಕಾರಿ ಪ್ರೌಢಶಾಲೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಕಿನ್ಯ ಘಟಕ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಸರಕಾರ ಶಾಲಾ ಪ್ರಾಂಭಕ್ಕೆ ಮುಂದಿನ ತಿಂಗಳಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ, ಆದರೆ ಶಾಲಾ ಕಟ್ಟಡಗಳ ನವೀಕರಣದ ಕೆಲಸ ಸ್ಥಗಿತಗೊಂಡಿದ್ದು ಅಧಿಕಾರಿಗಳು ಇನ್ನೂ ಈ ಬಗ್ಗೆ ಗಮನವಹಿಸಿಲ್ಲ ಎಂದು ನಿಯೋಗವು ತಿಳಿಸಿತು. ಈ ಸಂಧರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಳ್ಳಾಲ ಏರಿಯಾ ಅಧ್ಯಕ್ಷ ಇನಾಯತ್, ಕಿನ್ಯ ಘಟಕಾಧ್ಯಕ್ಷ ಸಲ್ಮಾನ್ ಫಾರಿಶ್ ,ಘಟಕಾ ಕಾರ್ಯದರ್ಶಿ ಗಫೂರ್ ಮತ್ತು ಸದಸ್ಯರಾದ ಮುಹ್ಸಿನ್ ಉಪಸ್ಥಿತರಿದ್ದರು.
