ಕಾವೂರು: ಅನಧಿಕೃತ ಮಾರುಕಟ್ಟೆ ತೆರವು

ಮಂಗಳೂರು: ನಗರದ ಕಾವೂರು ಜಂಕ್ಷನ್‍ನಲ್ಲಿ ಕೆಲವು ಸಮಯಗಳಿಂದ ತೆರೆದಿದ್ದ ಅನಧಿಕೃತ ಗೂಡಂಗಡಿ ಮತ್ತು ಮೀನು ಮಾರುಕಟ್ಟೆಯನ್ನು ಇಂದು ಬೆಳಗ್ಗೆ ತೆರವುಗೊಳಿಸಲಾಗಿದೆ. ಮನಪಾ ಕಂದಾಯ ಅಧಿಕಾರಿ ಪ್ರವೀಣ್ ನೇತೃತ್ವದ ತಂಡ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ 15ಕ್ಕೂ ಅಧಿಕ ಗೂಡಂಗಡಿಗಳು ಮತ್ತು ಮೀನು ಮಾರುಕಟ್ಟೆಯನ್ನು ತೆರವುಗೊಳಿಸಿದರು. ಈ ವೇಳೆ ವರ್ತಕರ ಜೊತೆಬ ಮಾತಿನ ಚಕಮಕಿಯೂ ನಡೆಯಿತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *