ಕಂದಾವರ ಮಾರುಕಟ್ಟೆ ಕಾನೂನು ಬಾಹಿರ ಏಲಂ: ಬಾವಾ ಆರೋಪ

ಮಂಗಳೂರು: ಕಂದಾವರ ಗ್ರಾಮ ಪಂಚಾಯತ್‍ನ ಮಾರುಕಟ್ಟೆಯ ವಾಣಿಜ್ಯ ಅಂಗಡಿಗಳನ್ನು ಕಾನೂನು ಬಾಹಿರವಾಗಿ ಏಲಂ ಮಾಡಲಾಗಿದೆ ಎಂದು ಮಾಜಿ ಶಾಸಕ ಮೊೈದೀನ್ ಬಾವಾ ಆರೋಪ ಮಾಡಿದ್ದಾರೆ. ಇಂದು ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್ ಕರೆದಿದ್ದರೂ ಶಾಸಕರ ಒತ್ತಡದ ಮೇರೆಗೆ ಏಲಂ ಮಾಡಿ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.
ಕಂದಾವರ ಗ್ರಾ.ಪಂ. ನ ಅಭಿವೃದ್ದಿ ಅಧಿಕಾರಿಯವರು 12 ತಿಂಗಳ ನಂತರ ಟೆಂಡರ್ ಕರೆಯಲು ಪತ್ರಿಕಾ ಪ್ರಕಟನೆ ನೀಡಿದ್ದರು. ಆದರೆ ಈ ನಿರ್ಣಯ ಅಸಿಂಧು ಎಂದು ಸ್ಟಾಲ್ ಬಾಡಿಗೆದಾರರೊಬ್ಬರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಸ್ಥಳೀಯ ಕಾರ್ಯ ನಿರ್ವಹಣಾಧಿಕಾರಿ ಪರಿಶೀಲಿಸಿ ಆ.21ರ ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ತಡೆ ಯಾಜ್ಞೆಯನ್ನು ನೀಡಿದ್ದರು. ತಡೆಯಾಜ್ಞೆಯನ್ನು ಈಮೇಲ್ ಮೂಲಕ ಸ್ಥಳೀಯ ಅಧಿಕಾರಿಗಳಿಗೆ ಕಳುಹಿಸಿದ್ದರು. ಸ್ಟಾಲ್ ಬಾಡಿಗೆದಾರರು ಬಜಪೆ ಪೊಲೀಸ್ ಅಧಿಕಾರಿಗೂ ದೂರು ನೀಡಿದ್ದರು. ಇಷ್ಟೆಲ್ಲ ಆದರೂ ಮಾರುಕಟ್ಟೆ ಏಲಂ ಮಾಡಲಾಗಿದೆ ಎಂದು ಬಾವಾ ಆಕ್ರೋಶ ವ್ಯಕ್ತಪಡಿಸಿದರು. ಕಂದಾವರ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಿಜಯಾ ಸುವರ್ಣ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರಂದ್ರ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *