ಐಪಿಎಲ್‌ ಟೈಟಲ್‌ ಹಕ್ಕು: ಟಾಟಾ ಆಸಕ್ತಿ

ನವದೆಹಲಿ: ಐಪಿಎಲ್‌ನ ಟೈಟಲ್‌ ಪ್ರಾಯೋಜಕತ್ವದಿಂದ ವಿವೋ ನಿರ್ಗಮಿಸಿದ ನಂತರ ಸದ್ಯ ಆ ಜಾಗ ತುಂಬಲು ಹಲವು ಕಂಪೆನಿಗಳು ಮುಂದೆ ಬಂದಿದ್ದು, ಬಿಡ್‌ ಸಲ್ಲಿಸಲು ನಿರ್ಧರಿಸಿವೆ. ಇದರಲ್ಲಿ ಸದ್ಯ ವಿಶ್ವದ ದೈತ್ಯ ಕಂಪೆನಿಗಳಲ್ಲಿ ಒಂದಾದ ಟಾಟಾ ಗ್ರೂಪ್‌ ಕೂಡ ಸೇರಿದೆ.

ಗಲ್ವಾನ್‌ನಲ್ಲಿ ಚೀನಾ-ಭಾರತ ಸಂಘರ್ಷದ ನಂತರ ಎರಡೂ ದೇಶಗಳ ನಡುವಿನ ಸಂಬಂಧ ಸದ್ಯ ಪಾತಾಳಕ್ಕಿಳಿದಿದೆ. ಈ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಸದ್ಯ ಭಾರತ ವ್ಯಾಪಾರ ಯುದ್ದದ ಮೂಲಕ ತಿರುಗೇಟು ನೀಡುತ್ತಿದೆ ಎಂದರೆ ತಪ್ಪಾಗಲಾರದು. ಇದೇ ಹಿನ್ನೆಲೆಯಲ್ಲಿ ವಿವೋ ಕೂಡ ಈ ಬಾರಿಯ ಐಪಿಎಲ್‌ನ ಟೈಟಲ್‌ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ಸದ್ಯ ತೆರವಾದ ಜಾಗ ತುಂಬಲು ಹಲವು ಕಂಪೆನಿಗಳು ಮುಂದೆ ಬಂದಿದ್ದು, ಬಿಡ್‌ನಲ್ಲಿ ಪಾಲ್ಗೊಳ್ಳಲು ಮುಂದಾಗಿದೆ. ಸದ್ಯ ಬಿಡ್ಡಿಂಗ್‌ಗೆ ಟಾಟಾ ಕಂಪೆನಿ ಆಸಕ್ತಿ ತೋರಿದೆ. ಜೊತೆಗೆ ಫ್ಯಾಂಟಸಿ ಸ್ಪೋರ್ಟ್ಸ್ ಸಂಸ್ಥೆ ಡ್ರೀಮ್ 11, ಇ-ಲರ್ನಿಂಗ್ ಸಂಸ್ಥೆ ಬೈಜೂಸ್ ಮತ್ತು ಕೆಲ ಸಂಸ್ಥೆಗಳು ಆಸಕ್ತಿ ತೋರಿಸಿವೆ. ಲಡಾಕ್ ಸಂಘರ್ಷದಲ್ಲಿ 20 ಭಾರತೀಯ ಯೋಧರು ಮೃತರಾದ ಬಳಿಕ ಚೀನಾ ಮೊಬೈಲ್ ಉತ್ಪಾದನಾ ಕಂಪನಿ ವಿವೋ ಜೊತೆಗಿನ ಐಪಿಎಲ್ ಪ್ರಾಯೋಜಕತ್ವದ ಒಪ್ಪಂದ ಮುರಿಯಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿತ್ತು. ಅದರಂತೆ ವಿವೋ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ. ವಿವೋ ನಿರ್ಗಮನದ ಬಳಿಕ 2020ರ ಐಪಿಎಲ್‌ಗೆ ಪ್ರಾಯೋಜಕತ್ವ ನೀಡಲು ಬಿಸಿಸಿಐಯು ಆಸಕ್ತರಿಂದ ಬಿಡ್ ಆಹ್ವಾನಿಸಿತ್ತು. ಬಿಡ್‌ಗೆ ಆಸಕ್ತಿ ಉಳ್ಳವರು ತಿಳಿಸುವಂತೆ ಸೋಮವಾರದಿಂದ (ಆಗಸ್ಟ್ 10) ಶುಕ್ರವಾರರ ವರೆಗೆ (ಆಗಸ್ಟ್ 14) ಕಾಲಾವಕಾಶ ನೀಡಿತ್ತು. ವಾರ್ಷಿಕವಾಗಿ 300 ಕೋ.ರೂ. ವ್ಯವಹಾರ ಹೊಂದಿರುವವರು ಮಾತ್ರ ಬಿಡ್‌ನಲ್ಲಿ ಭಾಗವಹಿಸಬಹುದು ಎಂದು ಬಿಸಿಸಿಐ ಹೇಳಿತ್ತು. ಟೆಲಿಕಾಮ್ ದೈತ್ಯ ಜಿಯೋ, ಗ್ರಾಹಕರ ಅಯುರ್ವೇದಿಕ್ ಉತ್ಪನ್ನಗಳ ಕಂಪೆನಿ ಪತಂಜಲಿ, ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಕಂಪೆನಿಗಳು ಬಿಡ್‌ನತ್ತ ಆಸಕ್ತಿ ತೋರಿವೆ ಎನ್ನಲಾಗಿತ್ತು. ಆದರೆ ಅವರ್ಯಾರೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಬಿಡ್‌ಗೆ ನೋಂದಾಯಿಸಿಕೊಂಡಿಲ್ಲ.  

Leave a Reply

Your email address will not be published. Required fields are marked *